ನ್ಯೂಸ್

ಜಮ್ಮು-ಕಾಶ್ಮೀರದ ಬಂಡಿಪೋರಾಕ್ಕೆ ಬರಲಿದೆ ಜವಾಹರ್ ನವೋದಯ ವಿದ್ಯಾಲಯ

ಶ್ರೀನಗರ: ಲೆಫ್ಟಿನೆಂಟ್ ಗವರ್ನರ್ ಜಿ. ಸಿ. ಮುರ್ಮು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿ ಬ್ರಾರ್ ಗ್ರಾಮದಲ್ಲಿ ಜವಾಹರ್ ನವೋದಯ ವಿದ್ಯಾಲಯ ನಿರ್ಮಾಣಕ್ಕೆ ಶಾಲಾ ಶಿಕ್ಷಣ ಇಲಾಖೆಗೆ 132 ಕನಾಲ್ 8 ಮರ್ಲಾ ಭೂಮಿ ಹಂಚಿಕೆ ಮತ್ತು ವರ್ಗಾವಣೆಗೆ ಅನುಮೋದನೆ ನೀಡಿದೆ.

ಶಾಲಾ ಮೂಲಸೌಕರ್ಯಗಳ ನಿರ್ಮಾಣ ಪೂರ್ಣಗೊಳ್ಳುವವರೆಗೆ, ಜೆಎನ್‌ವಿ ವಸತಿ ನಿರ್ಮಾಣ ಕಾರ್ಯಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ.

ಎಲ್ಲವೂ ಕಾರ್ಯರೂಪಕ್ಕೆ ಬಂದ ನಂತರ, ಶಾಲೆಯು ಸಂವಿಧಾನಾತ್ಮಕ ಶಿಕ್ಷಣದ ಹಕ್ಕಿನಡಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಬಂಡಿಪೋರಾ ಜಿಲ್ಲೆಯ ದೂರದ ಮತ್ತು ಅಕ್ಕಪಕ್ಕದ ಪ್ರದೇಶಗಳ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತದೆ.