ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಗ್ ಸಂಗತಿಗಳು ವೈರಲ್ ಆಗುವುದು ಇತ್ತೀಚಿನ ದಿನಗಳಲ್ಲಿ ಸರ್ವೆಸಾಮಾನ್ಯವಾಗಿದೆ. ಆದರೆ ಕೆಲವು ವರ್ಷಗಳ ಹಿಂದೆ ಫೇಮಸ್ ನಟರೊಬ್ಬರು ಸಿನಿಮಾವೊಂದಕ್ಕಾಗಿ ಜಿಂಗಿ ಚಕ.. ಜಿಂಗಿ ಚಕ..ಕುಚ್ ಕುಚ್..ಟುವ್ವಿ ಟುವ್ವಿ.. ಎಂದು ಹಾಡಿದ್ದ ಹಾಡು ಸಖತ್ ವೈರಲ್ ಆಗಿತ್ತು. ಆದರೆ ಅಂದು ಸೌಂಡ್ ಮಾಡದ ಈ ಸಾಂಗ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ 'ಯಾರಪ್ಪಾ ಇದನ್ನಾ ಹಾಡಿದ್ದು' ಎನ್ನುವ ಪ್ರಶ್ನೆ ಮೂಡಿತ್ತು. ಇದೀಗ ಉತ್ತರ ಸಿಕ್ಕಿದೆ.
ಜಿಂಗಚಕ ಜಿಂಗಚಕ ಕುಚು ಕುಚು ಟುವ್ವಿ ಟುವ್ವಿ, ತನನಂ ಗಿಲ್ ಗಿಲ್ ಕಿ, ತಮ್ನಂ ಬುಲ್ ಬುಲ್ ಕಿ” ಹಾಡಿನಲ್ಲಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದರು. ನವೀನ್ ಕೃಷ್ಣ, ವಾಸು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ರಿಲ್ಸ್ ಮೂಲಕವಾಗಿ ವೈರಲ್ ಆದಾಗ ಈ ಹಾಡಿನ ಗಾಯಕ ಯಾರು ಎನ್ನವ ಪ್ರಶ್ನೆ ಕಾಡಿತ್ತು. ಇದೀಗ ಈ ವಿಚಾರ ರೀವಿಲ್ ಆಗಿದೆ.
ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಸೀರಿಯಲ್ ನಟಿ ವೈಷ್ಣವಿ ಗೌಡಾ ಅವರು ಜಿಂಗಿ ಚಕ.. ಜಿಂಗಿ ಚಕ ಹಾಡಿನ ಗಾಯಕ ಯಾರು ಎನ್ನುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಾಡನ್ನು ಹಾಡಿದ್ದು, ಸ್ಯಾಂಡಲ್ವುಡ್ ನಟ ಅಶೋಕ್. ‘ಕೆಜಿಎಫ್’ ಸಿನಿಮಾದಲ್ಲಿ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಅಶೋಕ್ ಅವರು 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಖಾಸಗಿವಾಹಿನಿಯ ‘ಸೀತಾರಾಮ’ ಧಾರಾವಾಹಿಯಲ್ಲಿ ಅಶೋಕ್ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದು ನಾಯಕ ರಾಮ್ ಅವರ ಗೆಳೆಯನ ಪಾತ್ರ ಆಗಿದೆ. ಹೀಗೆ ಮಾತಾಡುವಾಗ ಈ ಹಾಡಿನ ಹಿನ್ನಲೆ ಧ್ವನಿ ಇವರದ್ದೇ ಅನ್ನೋದು ವೈರಲ್ ಆಗಿದೆ.
ಈ ಕುರಿತಾಗಿ ಮಾತನಾಡಿದ ನಟ, ಗಾಯಕ ಅಶೋಕ್, 'ತಿರುಪತಿ ತಿರುಮಲ ವೆಂಕಟೇಶ’ ಹಾಡನ್ನು ಹಾಡಿರುವ ನಾನು ಕೆಲ ದಿನಗಳ ಕಾಲ ಸಂಗೀತದ ಕಡೆಗೆ ಗಮನ ಕೊಟ್ಟಿರಲಿಲ್ಲ. ಯಾಕಂದ್ರೆ ನಟನೆ ಕಡೆಗೆ ಹೆಚ್ಚಿನ ಒಲವು ಇಟ್ಟುಕೊಂಡಿದ್ದರಿಂದ ಹಾಡೋದ್ರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಮಾಸ್ಟರ್ ಆನಂದ್ ಅವರು ‘5 ಈಡಿಯಟ್ಸ್’ ಸಿನಿಮಾದ ಹಾಡು ಹಾಡಿ ಅಂತಹೇಳಿದ್ದರು. ಜಿಂಗಚಕ ಜಿಂಗಚಕ’ ಹಾಡನ್ನು ನನ್ನ ತಂದೆ ರಾಮ್ ನಾರಾಯಣ್ ಅವರು ಬರೆದಿದ್ದರು. ಹೌದು ಈ ಹಾಡಿನಲ್ಲಿ ಸಾಹಿತ್ಯ ಇರೋದಿಲ್ಲ. ಆಡುಪದಗಳಾದ ‘ಜಿಂಗಚಕ ಜಿಂಗಚಕ ಜಾಂಗಮಳ’ ಎನ್ನುವಂತಹ ಪದಗಳನ್ನು ಪೋಣಿಸಿ ಹಾಡು ಬರೆದಿದ್ದೇನೆ. ಇದೊಂದು ಪ್ರಯೋಗ ಅಷ್ಟೇ. ಈ ಹಾಡು ಹಿಟ್ ಆದರೂ ಆಗಬಹುದು, ನಾಪತ್ತೆಯೂ ಆಗಬಹುದು ಎಂದು ನನ್ನ ತಂದೆ ರಾಮ್ ನಾರಾಯಣ್ ಹೇಳಿದ್ದರು. ಇದೀಗ ಅವ್ರ ಮಾತು ಸತ್ಯವಾಗಿದ್ದು, ಈ ಹಾಡು ಸಖತ್ ಟ್ರೆಂಡ್ ಆಗುತ್ತಿದೆ. ಈಗ ಖುಷಿಯಾಗಿ ಹೇಳಿಕೊಳ್ಳುತ್ತಿದ್ದೇನೆ ನಾನೆ ಆ ಹಾಡನ್ನು ಹಾಡಿದ್ದು, ಟ್ರೋಲ್ ಮಾಡಿ ಈ ಹಾಡನ್ನು ಹಿಟ್ ಮಾಡಿ, ನನ್ನ ಇನ್ನಷ್ಟು ಜನಪ್ರಿಯ ಗೊಳಿಸಿದವರಿಗೆ ತುಂಬಾ ಧನ್ಯವಾದಗಳು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಅಶೋಕ್ ಅವರು ಜಿಂಗಚಕ ಜಿಂಗಚಕ ಹಾಡು ಹಾಡಿದಾಗ ಸಿಹಿ ಪಾತ್ರಧಾರಿ ರಿತು ಸಿಂಗ್ ಕೂಡ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ವಿಷಯ ಈಗ ಸಖತ್ ವೈರಲ್ ಆಗ್ತಿದೆ.