ನ್ಯೂಸ್

ಜಿಯೋ ಕಂಪನಿ ಕೇಬಲ್​ ಅಳವಡಿಕೆ ವೇಳೆ ಗೇಲ್​ ಗ್ಯಾಸ್​ ಪೈಪ್​​ ಸ್ಫೋ​​​ಟ; ಮಹಿಳೆ ಸೇರಿ ಹಲವರಿಗೆ ಗಾಯ

lakshmihegde

ಆನೇಕಲ್: ಜಿಯೋ ಕಂಪನಿ ಕೇಬಲ್​ ಅಳವಡಿಕೆ ವೇಳೆ ಗೇಲ್​ ಗ್ಯಾಸ್​ ಪೈಪ್​ ಸ್ಫೋಟಗೊಂಡು ಓರ್ವ ಮಹಿಳೆ ಸೇರಿ ಹಲವರು ಗಾಯಗೊಂಡ ಘಟನೆ ಹೊಸರೋಡ್​ ಬಳಿ ನಡೆದಿದೆ.

ಜಿಯೋ ಕಂಪನಿಯ ಅಂಡರ್ ಕೇಬಲ್ ಅಳವಡಿಕೆ ಕಾಮಗಾರಿಯಿಂದ ಸಂಜೆ 7 ಗಂಟೆಗೆ ಅವಘಡ ಉಂಟಾಗಿದೆ. ಗ್ಯಾಸ್​ ಸ್ಫೋಟದಿಂದ ಸ್ಥಳೀಯ ಜನರು ಆತಂಕಗೊಂಡಿದ್ದಾರೆ.

ಪದೇಪದೆ ಕೇಬಲ್​ ಕಾಮಗಾರಿ ವೇಳೆ ಗ್ಯಾಸ್​ಪೈಪ್​ ಲೈನ್​ ಸ್ಫೋಟಗೊಳ್ಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.