ನ್ಯೂಸ್

ಜಿಹಾದಿ ಕೃತ್ಯವೇ? ಅಥವಾ ಭಯೋತ್ಪಾದಕರ ದಾಳಿಯೇ?: ದೇಶಾದ್ಯಂತ ಮನೆ ಮಾಡಿದ ಆತಂಕ!

ನವದೆಹಲಿ: ದೇಶದ ಹೆಮ್ಮೆಯ ಮತ್ತು ಸಾರ್ವಭೌಮತೆಯ ಪ್ರತೀಕವಾಗಿದ್ದ ಕೆಂಪುಕೋಟೆಯ ಬಳಿ ಸೋಮವಾರ(ನ.10) ಕಾರು ಸ್ಫೋಟ ಸಂಭವಿಸಿ 8 ಜನರು ಮೃತಪಟ್ಟಿದ್ದಾರೆ. ಅಲ್ಲದೆ, 30ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಇತ್ತೀಚಿಗೆ ಫರೀದಾಬಾದ್‌ನಲ್ಲಿ ಪತ್ತೆಯಾಗಿದ್ದ ಭಾರಿ ಸ್ಫೋಟಕಗಳಿಗೂ ದಿಲ್ಲಿಯಲ್ಲಿ ನಡೆದಿರುವ ಸ್ಫೋಟಕ್ಕೂ ಸಂಬಂಧ ಇರುವ ಶಂಕೆ ವ್ಯಕ್ತವಾಗಿದೆ. ಭಾರತದ ಹೃದಯ ಭಾಗದಲ್ಲಿ ಜನ ಸಂದಣಿ ಇದ್ದ ಪ್ರದೇಶದಲ್ಲಿ ರಾಷ್ಟ್ರ ವಿದ್ರೋಹಿ, ವಿಧ್ವಂಸಕ ಕೃತ್ಯ ಎಸಗಿರುವುದು ಖಂಡನೀಯ.

ಫರೀದಾಬಾದ್‌ ಕೇವಲ ಕಾಕತಾಳೀಯ ಘಟನೆಯಲ್ಲ. ಇದು ಪೂರ್ವನಿಯೋಜಿತ ಭಯೋತ್ಪಾದಕ ಕೃತ್ಯ ಎಂದೇ ಹೇಳಲಾಗುತ್ತಿದೆ. ವೈದ್ಯರ ನಿವಾಸದಿಂದ 2,900 ಕಿಲೋ ಗ್ರಾಮ್‌ ನಷ್ಟು ಸ್ಫೋಟಕಗೂ, ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಹಿಂದೊಮ್ಮೆ ಹಿಂದಿನ ಅಧಿಕಾರದಲ್ಲಿದ್ದ ಸರ್ಕಾರ, ಉಗ್ರರು ಕೆಂಪುಕೋಟೆಗೆ ತಲುಪಲು ಬಿಟ್ಟುಕೊಟ್ಟಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತದಲ್ಲಿ ಮತ್ತೆ ಅಂಥ ಕೃತ್ಯಕ್ಕೆ ಅವಕಾಶ ಸಿಗದು.

ಉಗ್ರರ ವಿಧ್ವಂಸಕ ಷಡ್ಯಂತ್ರ ವಿಫಲ

ಈ ಸಲ ಉಗ್ರರು ತಲೆಗೆ ರುಮಾಲು ಧರಿಸಿರಲಿಲ್ಲ, ಹರಿದ ಬ್ಯಾಗ್‌ ಹೆಗಲಿನಲ್ಲಿ ಹಾಕಿಕೊಂಡಿರಲಿಲ್ಲ. ಈ ಸಲ ಬಿಳಿಯ ಕೋಟ್‌ ಧರಿಸಿದ್ದರು. ಸುಶಿಕ್ಷಿತ ಉಗ್ರರಾಗಿದ್ದರು. ಬೀದಿ ರೌಡಿಗಳಾಗಿರಲಿಲ್ಲ. ಶಾಂತಿ ಕದಡಲು ಸಿದ್ಶರಾಗಿದ್ದ ವೈಟ್‌ ಕೋಟಿನ ಸುಶಿಕ್ಷಿತರಾಗಿದ್ದರು. ಕೇಂದ್ರ ಸರ್ಕಾರದ (ಬಿಜೆಪಿಯ) ರಚನಾತ್ಮಕ ಬುದ್ಧಿಮತ್ತೆ ಉಗ್ರರ ವಿಧ್ವಂಸಕ ಷಡ್ಯಂತ್ರವನ್ನು ವಿಫಲಗೊಳಿಸಿದೆ. ಗುಜರಾತ್‌ನಲ್ಲಿ ನಡೆದ ರೆಸಿನ್‌ ಷಡ್ಯಂತ್ರವನ್ನು ಇದೇ ರೀತಿ ವಿಫಲಗೊಳಿಸಲಾಗಿತ್ತು. ಇಲ್ಲೂ ಸುಶಿಕ್ಷಿತ ಭಯೋತ್ಪಾದಕರಿದ್ದರು. ವಿಜ್ಞಾನವನ್ನು ಜಿಹಾದಿ ಕೃತ್ಯಕ್ಕೆ ದುರ್ಬಳಕೆ ಮಾಡಲಾಗಿತ್ತು. ಮೋದಿ ಸರ್ಕಾರದ ಅಡಿಯಲ್ಲಿ ಒಂದೇ ಒಂದು ಜೀವ ಇದಕ್ಕೆ ಬಲಿಯಾಗುವುದಕ್ಕೆ ಮೊದಲೇ ಸಂಚನ್ನು ವಿಫಲಗೊಳಿಸಲಾಯಿತು.

ಕೃತ್ಯಗಳು ನಡೆಯುದಕ್ಕೂ ಮೊದಲೇ ನಿರ್ಮೂಲನೆ

ವೈಟ್‌ -ಕಾಲರ್‌ ಜಿಹಾದ್‌ ವಾಸ್ತವವಾಗಿದೆ. ಪ್ರಬಲ ಸರಕಾರ ಇದನ್ನು ಹತ್ತಿಕ್ಕಬಲ್ಲುದು. ಬಿಜೆಪಿ ವೈಟ್‌ ಕಾಲರ್‌ ಭಯೋತ್ಪದನೆಯ ವಿರುದ್ಧ ಸ್ಪಷ್ಟವಾಗಿ ನಿಂತಿದೆ. ಆದರೆ, ಹಿಂದಿನ ಸರ್ಕಾರದ ಪ್ರತಿಕ್ರಿಯೆಯಲ್ಲಿ ಗೊಂದಲ ಇತ್ತು. ಮುರ್ಷಿದಾಬಾದ್‌ನಲ್ಲಿ 150 ಬಾಂಬ್‌ಗಳು ಬಾಂಗ್ಲಾದೇಶದ ಗಡಿ ಭಾಗದಲ್ಲಿ ಪತ್ತೆಯಾಗಿತ್ತು. ತುಷ್ಟೀಕರಣ ಮತ್ತು ನಿಷ್ಕ್ರಿಯತೆಯಿಂದ ಭಯೋತ್ಪಾದನೆಗೆ ಕುಮ್ಮಕ್ಕು ಸಿಕ್ಕಿತ್ತು. ಬಿಜೆಪಿ ದೇಶದ ಗಡಿಯನ್ನು ಕಾಯುತ್ತದೆ. ಅಲ್ಲದೆ, ಈ ಹಿಂದಿನ ಸರ್ಕಾರದ ಆಳ್ವಿಕೆಯ ದಶಕಗಳಲ್ಲಿ ಭಾರತದಲ್ಲಿ ಸುರಕ್ಷತೆ ಇದ್ದಿರಲಿಲ್ಲ. ಮುಂಬಯಿನಿಂದ ದಿಲ್ಲಿ ತನಕ ಸ್ಫೋಟಗಳು ನಿರಂತರ ನಡೆಯುತ್ತಿತ್ತು. ಯಾಂತ್ರಿಕವಾಗಿ ಪ್ರತಿಕ್ರಿಯೆ ಇರುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುವುದಕ್ಕೆ ಮೊದಲೇ ನಿರ್ಮೂಲನೆಯಾಗುತ್ತದೆ.

ಬಾಟ್ಲಾಹೌಸ್‌ ಕಾರ್ಯಾಚರಣೆಯ ಬಳಿಕ ಸೋನಿಯಾ ಗಾಂಧಿಯವರು ಅತ್ತಿದ್ದರು. ಆದರೆ ಅಲ್ಲಿ ಪೊಲೀಸ್‌ ಅಧಿಕಾರಿ ಮೃತಪಟ್ಟಿದ್ದಾಗಿರಲಿಲ್ಲ, ಭಯೋತ್ಪಾದಕರೇ ಅವರನ್ನು ಕೊಂದಿದ್ದರು. ಆಗ " ಹಿಂದು ಭಯೋತ್ಪಾದನೆʼ ಪದವನ್ನೂ ಬಳಸಲಾಗಿತ್ತು. ಜಿಹಾದಿಗಳ ಕೃತ್ಯವನ್ನು ಸಣ್ಣದೆಂಬಂತೆ ಬಿಂಬಿಸುವ ಕೆಲಸ ನಡೆದಿತ್ತು. ಆದರೆ ಬಿಜೆಪಿ ರಾಷ್ಟ್ರದ ಗೌರವವನ್ನು ಮರು ಸ್ಥಾಪಿಸಿತು.

ಮಟ್ಟ ಹಾಕುತ್ತಿದೆ ಸರ್ಕಾರ

ಮೋದಿಯವರ ನೇತೃತ್ವದಲ್ಲಿ ಭದ್ರತಾ ಏಜೆನ್ಸಿಗಳು ನಿರ್ಭೀತಿಯಿಂದ, ಸರ್ವ ಸ್ವಾತಂತ್ರ್ಯದಿಂದ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಯಾವುದೇ ರಾಜಕೀಯ ಮಧ್ಯಪ್ರವೇಶ ಇರುವುದಿಲ್ಲ. ಭಾರತದ ವಿರುದ್ಧದ ಯಾವುದೇ ಬೆದರಿಕೆಯನ್ನು ಮಟ್ಟ ಹಾಕಲಾಗುತ್ತಿದೆ. ಇವತ್ತು ಭಯೋತ್ಪದಕರು ಲ್ಯಾಪ್‌ ಟಾಪ್‌ ಹಿಂದೆ ಇರುತ್ತಾರೆ. ಎನ್‌ ಕ್ರಿಪ್ಟೆಡ್‌ ಚಾಟ್‌ ಗಳನ್ನು ನಡೆಸುತ್ತಾರೆ. ತಂತ್ರಜ್ಞಾನ ಬಳಸುತ್ತಾರೆ. ಆದರೆ ಇಂದಿನ ಸರ್ಕಾರ ಇವರನ್ನೂ ಮಟ್ಟ ಹಾಕುತ್ತಿದೆ. ಹಿಂದಿನ ಸರ್ಕಾರದಲ್ಲಿ ಅಧಿಕಾರಿಗಳು ಭೀತರಾಗಿ ಕೆಲಸ ಮಾಡುತ್ತಿದ್ದರು. ಮೋದಿ ಸರಕಾರದಲ್ಲಿ ಅವರು ದೇಶದ ಬೆಂಬಲದೊಂದಿಗೆ ಕೆಲಸ ಮಾಡುತ್ತಾರೆ. ದುರ್ಬಲ ರಾಜಕೀಯ ಮತ್ತು ಪ್ರಬಲ ಆಡಳಿತದ ನಡುವೆ ವ್ಯತ್ಯಾಸ ಇದೆ.

ಕೆಂಪುಕೋಟೆಯ ಬಳಿಯ ದಾಳಿಯು ಕೇವಲ ಕಲ್ಲು, ಉಕ್ಕಿನ ಮೇಲೆ ನಡೆದ ದಾಳಿಯಲ್ಲ, ಭಾರತದ ಆತ್ಮದ ಮೇಲೆ ನಡೆದಿರುವ ದಾಳಿ. ಇದನ್ನು ಧ್ವಂಸಗೊಳಿಸಲಾಗಿದೆ. ಏಕೆಂದರೆ ಭಾರತ ಈಗ ಪ್ರಬಲವಾಗಿದೆ. ಸುರಕ್ಷಿತವಾದ ನಾಯಕತ್ವ ಇಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕ್ವದಲ್ಲಿ ಭಯೋತ್ಪಾದಕರ ಸಂಚುಗಳು ನಡೆಯುವುದಿಲ್ಲ. ಅವುಗಳು ನಿರ್ಮೂಲನೆಯಾಗುತ್ತವೆ. ಇದು ನವ ಭಾರತ. ಉಗ್ರರ ಪ್ರತಿಯೊಂದು ಸಂಚೂ ಇಲ್ಲಿ ವಿಫಲವಾಗುತ್ತವೆ.