ಎರಡು ದಶಕಗಳಿಂದ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಅಡುಗೆ ಮೇಲಿನ ಆಸಕ್ತಿಯು ಅವರನ್ನು ಪ್ರಸಿದ್ಧ ಯೂಟ್ಯೂಬರ್ ಆಗಿ ಮಾಡಿದೆ. ಜಾರ್ಖಂಡ್‌ನ ಜಮ್ತಾರಾ ನಿವಾಸಿ ಆದ ರಾಜೇಶ್ ರಾವಣಿ 1.86 ಯೂಟ್ಯೂಬ್ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಅವರು ತಮ್ಮ ಆನ್‌ಲೈನ್ ಗಳಿಕೆಯಿಂದ ಹೊಸ ಮನೆಯನ್ನು ಖರೀದಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜೇನ್, ತಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಮನೆ ಕಟ್ಟಿಸಿದ್ದರ ಬಗ್ಗೆ ಹೇಳಿದ್ದಾರೆ. ಗಂಭೀರ ಅಪಘಾತದಲ್ಲಿ ಕೈಗೆ ಗಾಯವಾಯಿತು. ಆದರೆ ಕುಟುಂಬದ ಜವಾಬ್ದಾರಿಗಳ ಕಾರಣ ಡ್ರೈವಿಂಗ್ ಅನ್ನು ಮುಂದುವರಿಸಿದೆ. ರಾಜೇಶ್ ಅವರು ಟ್ರಕ್ ಡ್ರೈವರ್ ಆಗಿ ಪ್ರತಿ ತಿಂಗಳು 25,000 ರಿಂದ 30,000 ರೂಪಾಯಿ ಗಳಿಸುವುದಾಗಿ ಹೇಳಿದರು.
ಆದರೆ ಯೂಟ್ಯೂಬ್ನಿಂದ ನನ್ನ ಗಳಿಕೆಯಲ್ಲಿ ಬದಲಾವಣೆ ಆಯಿತು. ಸಾಮಾನ್ಯವಾಗಿ 4 ರಿಂದ 5 ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತೇನೆ. ಕೆಲವೊಂದು ತಿಂಗಳು 10 ಲಕ್ಷ ರೂಪಾಯಿಯನ್ನು ಸಂಪಾದಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಮೊದಲ ವೈರಲ್ ವೀಡಿಯೊವನ್ನು ನೆನಪಿಸಿಕೊಂಡ ಅವರು, ನಾನು ವಾಯ್ಸ್‌ಓವರ್‌ನೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದೆ. ಜನರು ನನ್ನ ಮುಖವನ್ನು ತೋರಿಸುವಂತೆ ಕೇಳಿದರು. ಆಗ ನನ್ನ ಮಗ ನನ್ನ ಮುಖವನ್ನು ತೋರಿಸುವ ವಿಡಿಯೋವನ್ನು ಮಾಡಿದ. ಆ ವಿಡಿಯೋಗೆ ಒಂದೇ ದಿನದಲ್ಲಿ 4.5 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿತು ಎಂದು ಹೇಳಿದರು.
ಡ್ರೈವಿಂಗ್ ಮತ್ತು ಯೂಟ್ಯೂಬ್ ಕೆಲಸವನ್ನು ನಾನು ಏಕಕಾಲದಲ್ಲಿ ಮಾಡುತ್ತಿದ್ದೇನೆ. ನನ್ನ ಕುಟುಂಬದ ಬೆಂಬಲ ಮತ್ತು ಸಹಾಯವಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಇತ್ತೀಚೆಗೆ ರಾಜೇಶ್ ಮಾಡಿದ ವಿಡಿಯೋದಲ್ಲಿ ಗುವಾಹಟಿಗೆ ಹೋಗುವಾಗ ಬಿಹಾರ ಪ್ರವಾಹದ ಬಗ್ಗೆ ಚರ್ಚಿಸಿದರು. ತಮ್ಮ ಸ್ಥಾನವನ್ನು ತಲುಪಲು 850 ಕಿ.ಮೀ. ಸಾಗಬೇಕಿದೆ ಎಂದು ಹೇಳಿದ್ದರು. (ಏಜೆನ್ಸೀಸ್)