Jet plane crashes ಅಮೆರಿಕ: ಅನಾರೋಗ್ಯ ಮಗುವನ್ನು ಚಿಕಿತ್ಸೆಗೆ ಹೊತ್ತೊಯ್ಯುತ್ತಿದ್ದ ಜೆಟ್ ವಿಮಾನೊಂದು ಇಲ್ಲಿನ ಫಿಲಡೆಲ್ಫಿ ಬಳಿ ಪತನಗೊಂಡಿದ್ದು, ಮಗುವಿನ ಜತೆಗಿದ್ದ ಕುಟುಂಬಸ್ಥರು ಸೇರಿ 6 ಜನ ಶನಿವಾರ ಮೃತಪಟ್ಟಿದ್ದಾರೆ (ಫೆ.01) ಎಂದು ವರದಿಯಾಗಿದೆ.
ವಿಮಾನವು ಶಾಪಿಂಗ್ಮಾಲ್ ಬಳಿ ಪತನಗೊಂಡ ಕಾರಣ ನರೆಹೊರೆಯಲ್ಲಿ ಭಾರಿ ಪ್ರಮಾಣದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ವೈದ್ಯಕೀಯ ಸಾರಿಗೆ ಕಂಪನಿಯ ಜೆಟ್ ವಿಮಾನವಾಗಿದ್ದು, ಭಾರಿ ಅನಾಹುತದಿಂದ ವಿಮಾದಲಿದ್ದ ಯಾರು ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಸಾಲು ಸಾಲು ಮನೆಗಳ ಮೇಲೆ ವಿಮಾನ ಪತನಾಗಿದ್ದು, ಮನೆಯಲ್ಲಿನ ಸಾವು ನೋವುಗಳ ಬಗ್ಗೆ ಖಚಿತ ಮಾಹಿತಿ ಇಲ್ಲ. ಅನಾಹುತವಾದ ಪ್ರದೇಶಕ್ಕೆ ಕಲ್ಪಿಸುವ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಅಗ್ನಿಶಾಮಕದಳ ಅಧಿಕಾರಗಳು ತಿಳಿಸಿದ್ದಾರೆ.
ಈ ಕುರಿತು ಕಂಬನಿ ಮಿಡಿದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ''ಅಪಾಘಾತದಲ್ಲಿ ಮುಗ್ದ ಅತ್ಮಗಳು ಕಳೆದುಹೋಗಿವೆ''. ಘಟನಾ ಸ್ಥಳದಲ್ಲಿ ನಮ್ಮ ಅಧಿಕಾರಿ ಕಾರ್ಯೋನ್ಮುಖರಾಗಿದ್ದಾರೆ ಎಂದು ತಮ್ಮ ಎಕ್ಸ್(ಈ ಹಿಂದಿನ ಟ್ವೀಟರ್)ಖಾತೆಯಲ್ಲಿ ಬರೆದುಕೊಂಡಿದ್ದಾರೆ.(ಏಜೆನ್ಸೀಸ್)