ನ್ಯೂಸ್

ಜೇಕಿನಕಟ್ಟಿ ಗ್ರಾಮದಲ್ಲಿ ವಿಶ್ವ ಜಾನಪದ ದಿನಾಚರಣೆ ಆ. 22ರಂದು

ಸವಣೂರ: ತಾಲೂಕಿನ ಜೇಕಿನಕಟ್ಟಿ ಗ್ರಾಮದ ಶ್ರೀ ಮಲ್ಲನಗೌಡ ಮುಂದಿನಮನಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಧಾರವಾಡ ಕರ್ನಾಟಕ ಜಾನಪದ ಪರಿಷತ್​ ಜಿಲ್ಲಾ ಟಕದ ಆಶ್ರಯದಲ್ಲಿ ಆ. 22ರಂದು ಬೆಳಗ್ಗೆ 11ಕ್ಕೆ ವಿಶ್ವ ಜಾನಪದ ದಿನಾಚರಣೆ ನಡೆಯಲಿದೆ.
ನಿವೃತ್ತ ಪ್ರಾಚಾರ್ಯ ಗದಿಗೆಯ್ಯ ಪ್ರಭಯ್ಯನವರಮಠ ಉದ್ಘಾಟಿಸುವರು. ಬಸನಗೌಡ ಮುಂದಿನಮನಿ ಅಧ್ಯತೆ ವಹಿಸುವರು. ಕರ್ನಾಟಕ ಜಾನಪದ ಪರಿಷತ್​ ಜಿಲ್ಲಾ ಟಕದ ಅಧ್ಯ ಡಾ. ರಾಮು ಮೂಲಗಿ, ಗೋಟಗೋಡಿ ಜಾನಪದ ವಿವಿ ಅತಿಥಿ ಉಪನ್ಯಾಸಕ ಡಾ.ನಾಗರಾಜ ಎಸ್​., ನಿವತ್ತ ಪ್ರಾಚಾರ್ಯ ಎಸ್​.ಬಿ. ಕರೆಪ್ಪಗೌಡ, ರಂಗಭೂಮಿ ಜನಪದ ಹಿರಿಯ ಕಲಾವಿದ ಗದಿಗೆಯ್ಯ ಹಿರೇಮಠ, ಡಾ. ಎಚ್​.ಎಚ್​. ನದಾಪ್​ ಪಾಲ್ಗೊಳ್ಳಲಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.