ನ್ಯೂಸ್

ಮತ್ತೆ ವಿಶ್ವದ ಶ್ರೀಮಂತನಾದ ಜೆಫ್ ಬೆಜೋಸ್; ಹಿಂದೆ ಬಿದ್ದವರು ಯಾರು?

ನ್ಯೂಯಾರ್ಕ್: ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಅಮೆಜಾನ್ ಕಂಪನಿ ಸ್ಥಾಪಕ ಜೆಫ್ ಬೆಜೋಸ್ ಮತ್ತೆ ಸ್ಥಾನ ಅಲಂಕರಿಸಿದ್ದಾರೆ.

ಕಳೆದ ತ್ರೈಮಾಸಿಕದಲ್ಲಿ ಅವರು ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಕಂಪನಿ ಒಡೆಯ ಎಲಾನ್ ಮಸ್ಕ್​​ಗೆ ಸ್ಥಾನ ಬಿಟ್ಟು ಕೊಟ್ಟಿದ್ದರು ಎಂದು ಬ್ಲೂಮ್​​ಬರ್ಗ ವರದಿ ಮಾಡಿದೆ.

ಅಂತರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಟೆಸ್ಲಾದ ಷೇರುಗಳು ಶೇ 2.4 ರಷ್ಟು ಕುಸಿಯುವ ಮೂಲಕ ಎಲಾನ್​ ಮಸ್ಕ್ 4.6 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದರು.

ಕಳೆದ ಮೂರು ವರ್ಷ ಜೆಫ್ ಬೆಜೋಸ್​ನೆ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತನಾಗಿ ಮೆರದಿದ್ದರು. ಆದರೆ, ಕಳೆದ ಮೂರು ತಿಂಗಳಿನ ಹಿಂದೆ ಎಲಾನ್ ಮಸ್ಕ್ ಅವರು ಬೆಜೋಸ್​ನನ್ನು ಹಿಂದಿಕ್ಕಿದ್ದರು. ಇದೀಗ ಮತ್ತೆ ಬೆಜೋಸ್ ವಿಶ್ವದ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ.