ನ್ಯೂಸ್

ರಾಜ್ಯ ಬಂದ್​ಗೆ ಜೆಡಿಎಸ್​ ಬೆಂಬಲ ಇದ್ಯಾ? ದೇವೇಗೌಡ ಹೇಳಿದ್ದೇನು ಗೊತ್ತಾ?

arunakunigal

ಬೆಂಗಳೂರು: ರಾಜ್ಯ ಸರ್ಕಾರ ಜಾರಿ ಮಾಡಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಮತ್ತು ಇತರ ಸಂಘಟನೆಗಳು ಸೋಮವಾರ(ಸೆ.28) ರಾಜ್ಯ ಬಂದ್​ಗೆ ಕರೆ ನೀಡಿವೆ.

ಸೋಮವಾರ ನಡೆಯುವ ರಾಜ್ಯ ಬಂದ್​ಗೆ ಜೆಡಿಎಸ್​ ಕೂಡ ಸಾಥ್​ ನೀಡಲಿದೆ. ಈ ಬಗ್ಗೆ ಸ್ವತಃ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರೇ ಸ್ಪಷ್ಟಪಡಿಸಿದ್ದಾರೆ. ''ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಬಂದ್​ಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿರುತ್ತದೆ'' ಎಂದಿದ್ದಾರೆ. ಇದನ್ನೂ ಓದಿರಿ ಸೆ.28ರಂದು ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಬಂದ್ ನಡೆಸಲು ತೀರ್ಮಾನ

ಕಾಂಗ್ರೆಸ್​ ಕೂಡ ಈ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದೆ. ಈಗಾಗಲೇ ರೈತರ ಪ್ರತಿಭಟನೆಯ ತೀವ್ರತೆ ಅರಿತ ಪೊಲೀಸರು ಸಿಲಿಕಾನ್ ಸಿಟಿ ಸುತ್ತಮುತ್ತ ವಿಗಿ ಬಂದೋಬಸ್ತ್​ ಮಾಡುತ್ತಿದ್ದಾರೆ. 1,500ಕ್ಕೂ ಹೆಚ್ಚು ಸಿವಿಲ್‌ ಹಾಗೂ ಸಂಚಾರಿ ಪೊಲೀಸರು, 2,000ಕ್ಕೂ ಹೆಚ್ಚು ಕೆಎಸ್​ಆರ್​ಪಿ ಹಾಗೂ ಸಿಎಆರ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಟೌನ್ ಹಾಲ್, ಮೆಜೆಸ್ಟಿಕ್, ಫ್ರೀಡಂಪಾರ್ಕ್, ತುಮಕೂರು ರಸ್ತೆ, ಮಾಗಡಿ ರಸ್ತೆ, ವಿಧಾನಸೌಧ, ಮೈಸೂರ್ ರೋಡ್, ಹೊಸೂರು ರಸ್ತೆ ಹಾಗೂ ದೇವನಹಳ್ಳಿ ರಸ್ತೆಗಳಲ್ಲಿ ಪೊಲೀಸ್​ ಕಣ್ಗಾವಲಿದೆ.