ನ್ಯೂಸ್

ಜೆಡಿಎಸ್ ಸೇರಿದ ಬಿಜೆಪಿ, ಕಾಂಗ್ರೆಸ್ ಮುಖಂಡರು: ಪಕ್ಷಕ್ಕೆ ಸ್ವಾಗತಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ

reportermys

ಮಂಡ್ಯ: ಮತದಾನಕ್ಕೆ ಕೆಲವೇ ದಿನ ಬಾಕಿ ಇರುವಂತೆಯೇ ಶ್ರೀರಂಗಪಟ್ಟಣ ಕ್ಷೇತ್ರದ ತಾಲೂಕಿನ ಯಲಿಯೂರು, ತೂಬಿನಕೆರೆ ಸೇರಿದಂತೆ ಹಲವು ಗ್ರಾಮದ 50ಕ್ಕೂ ಹೆಚ್ಚು ಯುವ ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಯಾದರು.
ಯಲಿಯೂರು ಗ್ರಾಮದಲ್ಲಿ ಯುವಕರನ್ನು ಪಕ್ಷಕ್ಕೆ ಸ್ವಾಗತಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ನಮ್ಮ ಪಕ್ಷಕ್ಕೆ ಎಲ್ಲ ಕಾರ್ಯಕರ್ತರನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಪಕ್ಷ ಸೇರಿದ್ದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ. ನೀವು ನನ್ನೊಂದಿಗೆ ಎಂದಿಗೂ ಸಕ್ರಿಯವಾಗಿರಿ. ನಿಮ್ಮ ವಿಶ್ವಾಸವನ್ನು ನಾನು ಎಂದೆಂದಿಗೂ ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎಚ್.ಹೊನ್ನಪ್ಪ ಅವರ ಪುತ್ರ ಡಾ.ಆದರ್ಶ್‌ಗೌಡ ಮಾತನಾಡಿ, ಮತದಾನ ಇನ್ನು ಮೂರು ದಿನವಿರುವಾಗಲೂ ಜೆಡಿಎಸ್ ಪಕ್ಷಕ್ಕೆ ಸೇರುತ್ತಿರುವುಕ್ಕೆ ಶಾಸಕ ರವೀಂದ್ರ ಅವರ ಗುಣಗಳೇ ಕಾರಣವಾಗಿವೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಮೈ ಮರೆಯದೇ ಶಾಸಕರ ಮೊತ್ತೊಂದು ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.
ಈ ವೇಳೆ ಯೋಗೇಶ್, ಜಗದೀಶ್, ಯೋಗೇಶ್‌ಗೌಡ, ತೇಜಸ್, ಮಂಜು, ರೋಹಿತ್, ಕಿರಣ್, ಶ್ರೇಯಸ್, ಕಾರ್ತಿಕ್, ಹೇಮಂತ್, ಅಖಿಲೇಶ್, ಸುದೀಪ್, ಯೋಗರಾಜ್, ರಿತೇಶ್, ದರ್ಶನ್, ರವಿ, ರಘು, ಅರುಣ್, ಅದರ್ಶ್, ಮನು, ಪುನೀತ್ ಇತರರಿದ್ದರು.