ಬಿಜೆಪಿ ಸೇರ್ಪಡೆಯಾದ ಟ್ರಾವೆಲ್ ನಾಗೇಶ್, ಶ್ರೀಧರ್, ಲೋಕೇಶ್, ಲಕ್ಷ್ಮೀಶ್ , ಪ್ರವೀಣ್, ಪರಮೇಶ್, ವೆಂಕಟೇಶ್ ಹಾಗೂ ಬ್ಯಾಂಕ್ ಮೂರ್ತಿ ಅವರಿಗೆ ಶಾಸಕ ಎಲ್.ನಾಗೇಂದ್ರ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಎಂ. ಚಿಕ್ಕವೆಂಕಟು, ಕಿರಣ್ ಗೌಡ, ರವಿಕುಮಾರ್, ಎಲ್.ಚೌಡಪ್ಪ ಇದ್ದರು. 
ನ್ಯೂಸ್

ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಬಿಜೆಪಿ ಸೇರ್ಪಡೆ

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನ ಅನೇಕ ಮುಖಂಡರು ಶಾಸಕ ಎಲ್.ನಾಗೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.


ಕುಂಬಾರು ಕೊಪ್ಪಲು ಕಾವೇರಿ ಬಡಾವಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಸಿದ್ಧಾಂತ ಹಾಗೂ ಪ್ರಧಾನಿ ಮೋದಿ ಅವರ ಆಡಳಿತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಯಾದರು.

ಮುಖಂಡರಾದ ಟ್ರಾವೆಲ್ ನಾಗೇಶ್, ಶ್ರೀಧರ್, ಲೋಕೇಶ್, ಲಕ್ಷ್ಮೀಶ್ , ಪ್ರವೀಣ್, ಪರಮೇಶ್, ವೆಂಕಟೇಶ್ ಹಾಗೂ ಬ್ಯಾಂಕ್ ಮೂರ್ತಿ ಅವರಿಗೆ ಶಾಸಕ ಎಲ್.ನಾಗೇಂದ್ರ ಪಕ್ಷದ ಬಾವುಟ ನೀಡಿ ಬರ ಮಾಡಿಕೊಂಡರು.

ನಗರಪಾಲಿಕೆ ಸದಸ್ಯ ಎಂ. ಚಿಕ್ಕವೆಂಕಟು, ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷ ಕಿರಣ್‌ಗೌಡ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ರವಿಕುಮಾರ್, ಮುಖಂಡರಾದ ಎಲ್.ಚೌಡಪ್ಪ, ನರಸಿಂಹ, ಅಶ್ವಥ್, ದಿನೇಶ್ ಗೌಡ, ಪುನೀತ್ ಗೌಡ, ಜಯಣ್ಣ, ಗುರು, ಸಂಜೀವಿನಿ ಕುಮಾರ್, ಲೋಕನಾಯಕನಗರ ಶ್ರೀನಿವಾಸ್‌ಗೌಡ ಇದ್ದರು.