ಕೋಲಾರ: ತಾಲೂಕಿನ ಹೋಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ಸೋಮವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 11 ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಒಬ್ಬರು ಜಯಗಳಿಸಿದ್ದಾರೆ.
ಕಳೆದ ೫ ವರ್ಷಗಳಲ್ಲಿ 2.5 ವರ್ಷ ಕಾಂಗ್ರೆಸ್ ಹಾಗೂ ನಂತರದ ಅವಧಿಯನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕಿದ್ದರೂ, ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಚುನಾವಣೆ ತೀವ್ರ ಜಿದ್ದಾಜಿದ್ದಿಯಾಗಿ ಮಾರ್ಪಾಡಾದ ಹಿನ್ನಲೆಯಲ್ಲಿ, 12 ಸ್ಥಾನಗಳ ಪೈಕಿ 11 ಸ್ಥಾನಗಳು ಜೆಡಿಎಸ್ ಬೆಂಬಲಿತರ ಪಾಲಾಗಿವೆ. ಆ ಮೂಲಕ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ.
ಸಾಮಾನ್ಯ ಸ್ಥಾನಕ್ಕೆ 10 ಮಂದಿ ಸ್ಪರ್ದ್ದಧಿಸಿದ್ದು, ಆ ಪೈಕಿ ಜೆಡಿಎಸ್ ಬೆಂಬಲಿತ ಕೆ.ಆನಂದ್ 152 ಮತಗಳು, ಎಚ್.ಆರ್.ಗೋಪಾಲಕೃಷ್ಣ 169 ಮತಗಳು, ಜಿ.ಬೈರಾರೆಡ್ಡಿ 142 ಮತಗಳು, ಎಚ್.ಎಂ.ಶ್ರೀನಿವಾಸರೆಡ್ಡಿ 155 ಮತಗಳು, ಕಾಂಗ್ರೆಸ್ ಬೆಂಬಲಿತ ಎಚ್.ಬಿ.ನಾರಾಯಣಸ್ವಾಮಿ 156 ಮತಗಳನ್ನು ಪಡೆದುಕೊಂಡಿದ್ದಾರೆ.
ಹಿಂದುಳಿದ ವರ್ಗ ಎ ಸ್ಥಾನಕ್ಕೆ ಸ್ಪರ್ದ್ದಧಿಸಿದ್ದ ಜೆಡಿಎಸ್ ಬೆಂಬಲಿತ ಕೃಷ್ಣಪ್ಪ 172 ಮತಗಳು, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಸ್ಪರ್ದ್ದಧಿಸಿದ್ದ ಡಿ.ವಿ.ನಂಜುಂಡಗೌಡ 172 ಮತಗಳು, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಕೋದಂಡಪ್ಪ 173 ಮತಗಳು, ಪರಿಶಿಷ್ಟ ಪಂಗಡ ನಾರಾಯಣಸ್ವಾಮಿ 169 ಮತ, ಮಹಿಳಾ ಮೀಸಲು ಸ್ಥಾನದ ಪ್ರೇಮಾ 180 ಮತಗಳು, ಎಸ್.ರೂಪಶ್ರೀ 153 ಮತಗಳು, ಸಾಲಗಾರರಲ್ಲದ ಸ್ಥಾನಕ್ಕೆ ಸ್ಪರ್ದ್ದಧಿಸಿದ್ದ ಎಂ.ಎಸ್.ಗಿರೀಶ್ ೩೬೫ ಮತ ಪಡೆದು ಜಯಗಳಿಸಿದ್ದಾರೆ.
ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿ ಮುತ್ತಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಗೋಪಾಲಗೌಡ, ಮಂಜುನಾಥ್, ಮುದುವಾಡಿ ಗ್ರಾಪಂ ಅಧ್ಯಕ್ಷ ಹರೀಶ್, ಜೆಡಿಎಸ್ ಮುಖಂಡರಾದ ವಿವೇಕಾನಂದ, ಎಚ್.ಎಂ.ಶ್ರೀನಾಥ್‌ಬಾಬು, ಕಮ್ಮಸಂದ್ರ ಮೋಹನ್, ಬುಡ್ಡಾರೆಡ್ಡಿ, ಎಚ್.ಎಸ್.ರೆಡ್ಡಿ ಇದ್ದರು.