ನ್ಯೂಸ್

ಕಟ್ಟಡ ಕಟ್ಟಿದಾಕ್ಷಣ ಅಭಿವೃದ್ಧಿ ಆಗದು: ಜೆಡಿಎಸ್ ನಾಯಕರಿಗೆ ಬ್ಯಾಟಪ್ಪ ತಿರುಗೇಟು , ಸಾಗುವಳಿ ಚೀಟಿಗೆ ಖಾತೆ ಮಾಡಿಕೊಡದ ಎಚ್‌ಡಿಕೆ

Ramanagara

ಬಿಡದಿ : ಸಿ.ಎಂ.ಲಿಂಗಪ್ಪ ಶಾಸಕರಾಗಿದ್ದ ಸಮಯದಲ್ಲಿ ರೈತರಿಗೆ ನೀಡಿರುವ ಸಾಗುವಳಿ ಚೀಟಿಗಳಿಗೆ ಹಾಲಿ ಶಾಸಕರು ಖಾತೆ ವಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಸದಸ್ಯ ಬ್ಯಾಟಪ್ಪ ಜೆಡಿಎಸ್ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದರು. ಬಿಡದಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಮುಖಂಡರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಲಿಂಗಪ್ಪ ಅವರು ಶಾಸಕರಾಗಿದ್ದಾಗ ಪ್ರತಿ ಸೋಮವಾರ ತಾಲೂಕು ಕಚೇರಿಯಲ್ಲಿ ಕುಳಿತು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದರು.

ನೂರಾರು ರೈತರಿಗೆ ಸಾಗುವಳಿ ಪತ್ರ ವಿತರಿಸಿದರು. ಗ್ರಾಮೀಣ ಬಡವರಿಗೆ ಆಶ್ರಯ ನಿವೇಶನ ಹಂಚಿದರು. ನಂತರ ಶಾಸಕರಾಗಿ, ಮುಖ್ಯಮಂತ್ರಿಯೂ ಆದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒಂದು ನಿವೇಶನ ಕೊಡಲೂ ಸಾಧ್ಯವಾಗಿಲ್ಲ, ಸಾಗುವಳಿ ಪತ್ರ, ಖಾತೆ ಮಾಡಿಸಿ ವಾಡಿಸಿಕೊಡಲಾಗಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಾಲ್ಕು ಕಟ್ಟಡ ಕಟ್ಟಿದಾಕ್ಷಣ ಅಭಿವೃದ್ಧಿ ಎನ್ನಲಾಗದು. ಅಲ್ಲಿರುವ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಬಗ್ಗೆ ಪ್ರಸ್ತಾಪ ವಾಡದ ಜೆಡಿಎಸ್ ಮುಖಂಡರು ಅನ್ನ ತಿಂದ ಮನೆಗೆ ಕನ್ನ ಹಾಕುವ ಗುಣವಿರುವ ನಾಗರಾಜು ಅವರನ್ನು ಮುಂದಿಟ್ಟುಕೊಂಡು ಲಿಂಗಪ್ಪ ವಿರುದ್ದ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಜೆಡಿಎಸ್ ಪಕ್ಷ ಎಂತಹ ಸ್ಥಿತಿಗೆ ತಲುಪಿದೆ ಎಂದು ಎಂದು ತಿಳಿಯಬಹುದಾಗಿದೆ.

ಆತನಿಗೆ ಹಿಂದೆ ರಕ್ಷಣೆ ನೀಡಿದ್ದೆ ಎಲ್.ಚಂದ್ರಶೇಖರ್, ಶಶಿ ಮತ್ತು ನಾನು. ಇನ್ನು ಮುಂದೆ ಲಿಂಗಪ್ಪ ಅವರ ವಿರುದ್ದ ವಾತನಾಡುವಾಗ ಎಚ್ಚರಿಕೆ ಇರಲಿ ಎಂದು ಎಚ್ಚರಿಸಿದರು. ಪುರಸಭೆ ಸ್ಥಾಯಿ ಸಮಿತಿ ವಾಜಿ ಅಧ್ಯಕ್ಷ ಸಿ. ಉಮೇಶ್ ವಾತನಾಡಿ, ಸಿ.ಎಂ. ಲಿಂಗಪ್ಪ ಹಿರಿಯ ಅನುಭವಿ ನಿಸ್ವಾರ್ಥ ರಾಜಕಾರಕಣಿಯಾಗಿದ್ದಾರೆ. ಜೆಡಿಎಸ್ ಮುಖಂಡರು ಅವರ ಮಟ್ಟದಲ್ಲಿ ಚರ್ಚೆ ವಾಡುವ ಪ್ರಬುಧ್ದರಲ್ಲ ಎಂದು ಕಾಲೆಳೆದರು.

ಅವರ ಮಗ ಮತ್ತು ಸೊಸೆ ಸ್ಪರ್ಧಿಸಿದ್ದ ಎರಡು ವಾರ್ಡ್‌ಗಳಲ್ಲಿಯೆ ಚುನಾವಣೆ ಮಾಡಿದ್ದರೆ ಅವರು ಸುಲಭವಾಗಿ ಗೆಲುವು ಸಾಧಿಸುತ್ತಿದ್ದರು. ಅಂದು ಅವರು ನಿಸ್ವಾರ್ಥ ರಾಜಕಾರಣವನ್ನು ಪ್ರದರ್ಶಿಸಿದರು. ಪುತ್ರ ಎಲ್.ಚಂದ್ರಶೇಖರ್ ಬಿಜೆಪಿಗೆ ಹೋದಾಗ ಅವರ ನಡೆಯನ್ನು ಬೆಂಬಲಿಸದೆ ಕಾಂಗ್ರೆಸ್ ಪಕ್ಷದ ಪರವಾಗಿ ಬಳ್ಳಾರಿಯಲ್ಲಿ ನಡೆದ ಎಂಪಿ ಚುನಾವಣೆ ನಡೆಸಿದರು. ಅವರ ಬಗ್ಗೆ ಏನೂ ತಿಳಿಯದ ವ್ಯಕ್ತಿಗಳು ಪ್ರಚಾರದ ಗೀಳಿನಲ್ಲಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ತಾಪಂ ವಾಜಿ ಅಧ್ಯಕ್ಷ ಜಯಚಂದ್ರ ವಾತನಾಡಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಸ್ಥಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಮತ್ತು ಸಂವಿಧಾನಕ್ಕೆ ಮಾಡಿದ ಅಪವಾನವಾಗಿದೆ. ಅವರ ಹೇಳಿಕೆ ವಿರೋಧಿಸಿ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಸಲು ದಲಿತ ಸಂಟನೆಗಳ ಪದಾಧಿಕಾರಿಗಳು ಚರ್ಚೆ ನಡೆಸುತ್ತಿದ್ದು, ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ಚನ್ನಪಟ್ಟಣದಿಂದಲೇ ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಹಿಂದುಳಿದ ಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಲಸಿನಮರದೊಡ್ಡಿನಾಗೇಶ್, ಪುರಸಭಾ ವಾಜಿ ನಾಮಿನಿ ಸದಸ್ಯ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಅಭಿಷೇಕ್ ಮತ್ತಿತರಿದ್ದರು.