ನ್ಯೂಸ್

ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೆ ತರಲು ಯತ್ನ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

Ramanagara

ಬಿಡದಿ:  ನಾಡಿನ ನಾಡಿನ ಜನರ ಆಶೀರ್ವಾದದಿಂದ ‘ಕರ್ನಾಟಕದ ಆಡಳಿತ ಕರ್ನಾಟಕದಿಂದಲೇ’ ಎಂಬ ೋಷಣೆಯೊಂದಿಗೆ ಸ್ವತಂತ್ರ ಸರ್ಕಾರವನ್ನು ಅಧಿಕಾರಕ್ಕೆ ತರಲು ಜನತಾ ಪರ್ವ 1.0 ಮಿಷನ್ 123 ಗುರಿಯಿರಿಸಿಕೊಂಡು ಕಾರ್ಯಾಗಾರದಲ್ಲಿ ಚರ್ಚೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬಿಡದಿಯ ಕೇತಿಗಾನಹಳ್ಳಿ ತೋಟದ ಮನೆಯ ಪ್ರಾಂಗಣದಲ್ಲಿ ಸೋಮವಾರದಿಂದ ಜೆಡಿಎಸ್ ಆಯೋಜಿಸಿರುವ ನಾಲ್ಕು ದಿನಗಳ ಕಾರ್ಯಾಗಾರದ ಸಿದ್ಧತೆ ಬಗ್ಗೆ ಭಾನುವಾರ ಸುದ್ದಿಗಾರರೊಂದಿಗೆ ವಾಹಿತಿ ಹಂಚಿಕೊಂಡರು.

ಕನ್ನಡ ನಾಡಿನ ಜನರಿಗೆ ಶಾಶ್ವತ ಭವಿಷ್ಯ ನಿರ್ಮಿಸುವುದು ಜನತಾದಳದ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಹಂಗಿಲ್ಲದೆ ಜೆಡಿಎಸ್ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವ ಬಗ್ಗೆ ಚಿಂತಿಸಲಾಗಿದೆ ಎಂದರು.

2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಲು ಈಗಾಗಲೇ ಸೂಚಿಸಿರುವ 100 ಅಭ್ಯರ್ಥಿಗಳು, ಶಾಸಕರು ಪಕ್ಷದ ಗುರಿ ಮುಟ್ಟಿ ಪಂಚರತ್ನಗಳ ಕಾರ್ಯಕ್ರಮವನ್ನು ಜನರ ಹತ್ತಿರಕ್ಕೆ ತೆಗೆದುಕೊಂಡು ಹೋಗುವುದು ಮತ್ತು ದೇಶದಲ್ಲಿನ ರಾಜಕೀಯ ಬೆಳವಣಿಗೆಗಳ ಆಧಾರದ ಮೇಲೆ ನಾಯಕತ್ವ ಗಟ್ಟಿಗೊಳಿಸುವ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ಟಾಸ್ಕ್ ನೀಡಲಾಗುತ್ತಿದೆ ಎಂದರು. ನಮ್ಮ ಗುರಿ 123 ಆಗಿದ್ದು, ಅಷ್ಟಕ್ಕೆ ಸೀಮಿತವಾಗದೆ ಮುಂದುವರಿಯಲಿದೆ. ಮೂರು ತಿಂಗಳ ಕಾಲ ಕೊಡುವ ಟಾಸ್ಕ್‌ನಲ್ಲಿ ಅವರು ಯಶಸ್ವಿಯಾದರಷ್ಟೇ ಮುಂದಿನ ಜನವರಿಯಲ್ಲಿ ಅಂತಿಮ ಅಭ್ಯರ್ಥಿಗಳ ಹೆಸರನ್ನು ಸಾರ್ವಜನಿಕವಾಗಿ ೋಷಿಸಲಾಗುವುದು. ಈಗ ಸೂಚಿಸಿರುವ ಅಭ್ಯರ್ಥಿಗಳು ಜನರನ್ನು ತಲುಪುವಲ್ಲಿ ವಿಫಲವಾದರೆ ಮತ್ತೋರ್ವ ಅಭ್ಯರ್ಥಿ ಆಯ್ಕೆ ವಾಡಲಾಗುವುದು ಎಂದು ಹೇಳಿದರು.

ಇಂದು ಉದ್ಘಾಟನೆ :  ಸೆ.27ರ ಸೋಮವಾರ ಆರಂಭವಾಗುವ ಕಾರ್ಯಾಗಾರದಲ್ಲಿ ವರಿಷ್ಠರಾದ ಎಚ್.ಡಿ.ದೇವೇಗೌಡ, ಯುವ ಟಕದ ರಾಜ್ಯಾಧ್ಯಕ್ಷ ನಿಖಿಲ್, ಸಂಸದ ಪ್ರಜ್ವಲ್ ರೇವಣ್ಣ, ಪಕ್ಷದ ಶಾಸಕರು, ಜಿಲ್ಲಾಧ್ಯಕ್ಷರು ಸೇರಿ ಹಲವು ಪ್ರಮುಖರು ಭಾಗವಹಿಸಲಿದ್ದಾರೆ. ನಾಯಕತ್ವ ಬೆಳೆಸಿಕೊಳ್ಳುವ ವಿಷಯವಾಗಿ ಕರಜಗಿ, ದಕ್ಷಿಣ ಭಾರತದಲ್ಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವ ವಿಷಯವಾಗಿ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರಿಂದ ಉಪನ್ಯಾಸ ನಡೆಯಲಿದೆ.

ಪಂಚರತ್ನ ಕಾರ್ಯಕ್ರಮ :  ರಾಜ್ಯದ ಪ್ರತಿ ಕುಟುಂಬಕ್ಕೆ ಉಚಿತವಾಗಿ ಗುಣಾತ್ಮಕ ಶಿಕ್ಷಣ, ಆರೋಗ್ಯ ಸೇವೆ, ವಸತಿ ಕಲ್ಪಿಸುವುದು, ಮಹಿಳಾ ಸಬಲೀಕರಣ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ, ರೈತರ ಸ್ವಾವಲಂಬಿ ಬದುಕಿಗೆ ಯೋಜನೆ ರೂಪಿಸುವುದು ಪಂಚರತ್ನ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿದ್ದು, ಇವು ಮಿಷನ್ 123ನ ಗೆಲುವಿಗೆ ಮೂಲ ಮಂತ್ರವಾಗಲಿದೆ.

ಸಿದ್ದರಾಮಯ್ಯ ಸದನದಲ್ಲಿ ಜನಗಣತಿಯ ಬಗ್ಗೆ ಚರ್ಚಿಸಿದ್ದರೆ ಸಂಪೂರ್ಣವಾಗಿ ಚರ್ಚಿಸಿ ಜನರಿಗೆ ಸತ್ಯ ಹೇಳಬಹುದಿತ್ತು. ಸುಳ್ಳು ಹೇಳಲು ಮಿತಿಯಿದೆ. ರಾಜ್ಯದ ಜನರಿಗೆ ಬೀದಿಯಲ್ಲಿ ಹೇಳುವ ಅಗತ್ಯವಿರಲಿಲ್ಲ. ಇದು ಅವರ ಇಬ್ಬಗೆ ನೀತಿಯಾಗಿದ್ದು, ಅವರು ಪ್ರಚಾರಕ್ಕಾಗಿ ನನ್ನನ್ನು ಕೆಣಕುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ