ಮೂಡಿಗೆರೆ ತಾಲೂಕು ಗೋಣಿಬೀಡು ಹೊಯ್ಸಳ ಜೆಸಿಐ ಸಪ್ತಾಹದಲ್ಲಿ ನಿವೃತ್ತ ಪಶುಪಾಲನಾ ಇಲಾಖೆ ಅಧಿಕಾರಿ ಅಪ್ಪಣ್ಣ ಅವರನ್ನು ಸನ್ಮಾನಿಸಲಾಯಿತು. ಎಚ್.ಡಿ.ಆದರ್ಶ, ಆಶಾ ಜೈನ್, ಡಾ. ಮೋಹನ್ ರಾಜಣ್ಣ, ಸಿ.ಎಸ್.ಚಂದ್ರಶೇಖರ್, ಬಿ.ಎಂ.ಜಗತ್ ಇತರರಿದ್ದರು. 
ನ್ಯೂಸ್

ಸಾಮಾಜಿಕ ಕಾರ್ಯಗಳ ಪರಿಚಯ

ಜಿ. ಗಜೇಂದ್ರ

ಮೂಡಿಗೆರೆ: ಜಿಸಿಐ ಗೋಣಿಬೀಡು ಹೊಯ್ಸಳ ಸಪ್ತಾಹದ ಸಮಾರೋಪ ಭಾನುವಾರ ನಡೆಯಿತು. ಜೆಸಿಐ ವಲಯಾಧ್ಯಕ್ಷೆ ಆಶಾ ಜೈನ್ ಮಾತನಾಡಿ, ಹೆಚ್ಚು ಸ್ನೇಹಿತರನ್ನು ಸಂಪಾದಿಸುವುದು ಸಮಾಜದಲ್ಲಿ ಯುವ ಸಮುದಾಯದ ಶ್ರೀಮಂತಿಕೆಯಾಗಿದೆ. ಜೆಸಿಐ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಾಮಾಜಿಕ ಕಾರ್ಯಗಳ ಪರಿಚಯವಾಗುತ್ತದೆ ಎಂದು ತಿಳಿಸಿದರು.
ಜೆಸಿಐ ಗೋಣಿಬೀಡು ಹೊಯ್ಸಳ ಸ್ಥಾಪಕಾಧ್ಯಕ್ಷ ಡಾ. ಮೋಹನ್ ರಾಜಣ್ಣ ಮಾತನಾಡಿ, ಯುವ ಸಮುದಾಯಕ್ಕೆ ನಾಯಕತ್ವದ ಗುಣಗಳನ್ನು ಕಲಿಸಿಕೊಡುತ್ತಿರುವುದೇ ಜೆಸಿಐ ಸಂಸ್ಥೆ. ಸಮಾಜ ಸೇವೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ಜೆಸಿಐ ಅಧ್ಯಕ್ಷ ಎಚ್.ಜಿ.ಆದರ್ಶ, ನಿಕಟಪೂರ್ವಾಧ್ಯಕ್ಷ ಸಿ.ಎಸ್.ಚಂದ್ರಶೇಖರ್, ಕಾರ್ಯದರ್ಶಿ ಬಿ.ಎಂ.ಜಗತ್, ವೈ.ಬಿ.ಸುಂದ್ರೇಶ್, ಎಂ.ಸಿ.ಗಣೇಶ್ ಗೌಡ, ಯೋಗೇಶ್‌ಕುಮಾರ್, ಸತ್ಯ ಕುಮಾರ್, ರವಿಕುಮಾರ್, ರಂಜಿತ್, ಪೂರ್ಣೇಶ್, ಭರತ್, ಜ್ಯೋತಿ, ಶ್ವೇತಾ, ದರ್ಶನ್, ದಿಲೀಪ್, ಸಂತೋಷ್, ಚೇತನ್, ಅಪ್ಪಣ್ಣ ಇತರರಿದ್ದರು.