ಕೋಲಾರ ತಾಲೂಕಿನ ಅಚ್ಚಟ್ಟನಹಳ್ಳಿ ಸಮೀಪ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಒತ್ತುವರಿ ಜಾಗ ತೆರವುಗೊಳಿಸಿದರು. 
ನ್ಯೂಸ್

ಅರಣ್ಯದಂಚಿನಲ್ಲಿ ಮತ್ತೆ ಜೆಸಿಬಿ ಸದ್ದು!

ಕಿರುವಾರ ಎಸ್.ಸುದರ್ಶನ್

ಕೋಲಾರ: ತಾಲೂಕಿನ ಅಚ್ಚಟ್ಟನಹಳ್ಳಿ ಸಮೀಪದ ಅರಣ್ಯ ಭೂಮಿ ಒತ್ತುವರಿಯನ್ನು ಅರಣ್ಯಾಧಿಕಾರಿಗಳು ಶನಿವಾರ ಮುಂಜಾನೆಯಿಂದಲೇ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ಅರಣ್ಯ ಇಲಾಖೆ ಡಿಸಿಎಫ್ ಏಡುಕೊಂಡಲು ನೇತೃತ್ವದಲ್ಲಿ ಶನಿವಾರ ಮುಂಜಾನೆ 4 ಗಂಟೆಯಿಂದಲೇ ಕಾರ್ಯಾಚರಣೆಗಿಳಿದ 40 ಜೆಸಿಬಿಗಳು ಸುಮಾರು 400 ಎಕರೆ ಪೈಕಿ 350 ಎಕರೆ ತೆರವುಗೊಳಿಸಿದವು. ಇದಕ್ಕೆ ರೈತರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರೂ ಕಿವಿಗೊಡದ ಅಽಕಾರಿಗಳು ತೆರವು ಕಾರ್ಯಾಚರಣೆ ಮುಂದುವರಿಸಿದರು.
ಮಾಲೂರು ತಾಲೂಕಿನ ವಲಯ ಅರಣ್ಯ ವ್ಯಾಪ್ತಿಯ 400 ಎಕರೆ ಜಮೀನನ್ನು ಸರ್ವೇ ಮಾಡಿ ಒತ್ತುವರಿದಾರರಿಗೆ ನೋಟಿಸ್ ನೀಡಿ, ಸ್ವಯಂ ಪ್ರೇರಿತರಾಗಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದ್ದರೂ ಕೆಲ ರೈತರು ಬೆಳೆ ಬೆಳೆಯುತ್ತಿದ್ದರು. ಶನಿವಾರ ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿ ಹಾಗೂ ಪೊಲೀಸರ ಬಂದೋಬಸ್ತ್‌ನೊಂದಿಗೆ 40 ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು.
ಟೊಮ್ಯಾಟೊ, ಬೀನ್ಸ್, ಕೋಸು ಬೆಳೆಯನ್ನು ನಾಶಪಡಿಸಿದ್ದರಿಂದ ರೈತರು ಕಂಗಾಲಾಗಿ, ಜನಪ್ರತಿನಿಽಗಳನ್ನು ಸಂಪರ್ಕಿಸಲು ಯತ್ನಿಸಿದರೂ ಯಾರೊಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಇದು ರೈತರನ್ನು ಮತ್ತಷ್ಟು ಕೆರಳಿಸಿತ್ತು.
ಡಿಸಿಎಫ್ ಏಡುಕೊಂಡಲು ಮಾತನಾಡಿ, ಸುಮಾರು 2,000 ಕೋಟಿ ರೂ. ಬೆಲೆ ಬೆಲೆಬಾಳುವ 350 ಎಕರೆ ಜಾಗವನ್ನು ರಕ್ಷಣೆ ಮಾಡಿದ್ದೇವೆ. ಕೈಗಾರಿಕೆ ಪ್ರದೇಶವಾಗಿರುವುದರಿಂದ ಒಂದು ಎಕರೆಗೆ 5 ಕೋಟಿ ರೂ.ಗೂ ಹೆಚ್ಚಿನ ಮೌಲ್ಯವಿದೆ. ಒತ್ತುವರಿ ತೆರವುಗೊಳಿಸುವಂತೆ ಮೂರು ತಿಂಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ತೆರವಿಗೆ ಶೇ.95 ಮಂದಿ ಸಹಕರಿಸಿದ್ದು, ಒತ್ತುವರಿ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಹೇಳಿದರು.