ನ್ಯೂಸ್

ಡಿವೋರ್ಸ್ ಆದ್ರೂ ಮತ್ತೆ ಒಂದಾಗ್ತಾರಾ ಜಯಂ ರವಿ-ಆರತಿ? ಪತ್ನಿಯ ಮೇಲೆ ಪ್ರೀತಿ ಕಡಿಮೆ ಆಗಿಲ್ವಾ?

ಜಯಂ ರವಿ ಅವರು ಇನ್​ಸ್ಟಾಗ್ರಾಮ್ ಮೂಲಕ ಪತ್ನಿ ಆರತಿ ಅವರೊಂದಿಗಿನ ವೈವಾಹಿಕ ಜೀವನ ಕೊನೆಗೊಳಿಸುತ್ತಿರುವುದಾಗಿ ಅನೌನ್ಸ್ ಮಾಡಿದರು.

ಕಾಲಿವುಡ್ ನಟ ಜಯಂ ರವಿ ಹಾಗೂ ಆರತಿ ಅವರ ಡಿವೋರ್ಸ್ ಭಾರೀ ಸುದ್ದಿಯಾಗಿತ್ತು. ಕಾಲಿವುಡ್​ನ ಅತ್ಯಂತ ಮುದ್ದಾದ ಜೋಡಿಯಾಗಿದ್ದ ಇವರು ಇಬ್ಬರು ಗಂಡು ಮಕ್ಕಳ ಜೊತೆ ಹ್ಯಾಪಿಯಾಗಿದ್ದರು. ಪೊನ್ನಿಯಿನ್ ಸೆಲ್ವನ್ ನಟನ ಫ್ಯಾಮಿಲಿ ಲೈಫ್​ನಲ್ಲಿ ಸಮಸ್ಯೆಗಳಿವೆ ಎಂದು ರಿವೀಲ್ ಆಗಿ ಕೆಲವೇ ವಾರದಲ್ಲಿ ಜಯಂ ರವಿ ಹಾಗೂ ಆರತಿ ರವಿ ಡಿವೋರ್ಸ್ ವಿಚಾರ ಎಲ್ಲರಿಗೂ ಶಾಕ್ ಕೊಟ್ಟಿತ್ತು.

ಈ ಒಂದು ಒಡಕಿಗೆ ಆರತಿ ಅವರ ತಾಯಿಯೇ ಕಾರಣ ಎನ್ನಲಾಗುತ್ತಿದೆ. ಆರತಿ ಅವರ ತಾಯಿ ಪ್ರೊಡ್ಯೂಸ್ ಮಾಡುತ್ತಿದ್ದ ಪ್ರಾಜೆಕ್ಟ್​ನಲ್ಲಿ ಜಯಂ ರವಿ ನಟಿಸುವಾಗ ನಟನಿಗೆ ಮಾರ್ಕೆಟ್ ವ್ಯಾಲ್ಯೂ ಕಡಿಮೆ ಇದೆ ಎಂದು ಸಂಭಾವನೆ ಕಡಿತಗೊಳಿಸಿದ್ದು ಸೊಸೆ-ಅಳಿಯನ ಮಧ್ಯೆ ಜಗಳ ತಂದಿದೆ. ನಂತರ ಇದೇ ಮನಸ್ತಾನ ದಂಪತಿ ಮಧ್ಯೆಯೂ ಒಡಕು ತಂದಿದೆ ಎನ್ನಲಾಗಿದೆ.

ತ್ತೀಚೆಗೆ ಜಯಂ ರವಿ ಅವರ ಪೋಸ್ಟ್ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ನಟ ಜಯಂ ರವಿ ಅವರು ಶೇರ್ ಮಾಡಿದ ಒಂದು ಪೋಸ್ಟ್ ಈ ಜೋಡಿ ಮತ್ತೆ ಒಂದಾಗುತ್ತಾರೆ ಎನ್ನುವ ಒಂದು ಹಿಂಟ್ ಕೊಟ್ಟಿದೆ. ತಮ್ಮ ರೀಸೆಂಟ್ ಫೋಟೋ ಶೂಟ್ ಭಾಗವಾಗಿ ಕ್ಲಿಕ್ ಮಾಡಿದ ಒಂದಷ್ಟು ಫೋಟೋಗಳನ್ನು ನಟ ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಮಾಡಿದರು. ಇದನ್ನು ನೋಡಿದ ನೆಟ್ಟಿಗರು ಅಚ್ಚರಿಯ ವಿಷಯವೊಂದನ್ನು ಗಮನಿಸಿದ್ದಾರೆ.ಜಯಂ ರವಿ ಅವರ ವಿಚ್ಛೇದನೆಯಾಗಿ ಒಂದು ತಿಂಗಳಾಗುತ್ತಾ ಬಂದು. ಆದರೆ ವೈರಲ್ ಆಗಿರುವ ಫೊಟೋದಲ್ಲಿ ಜಯಂ ರವಿ ಅವರ ಬೆರಳಲ್ಲಿ ಉಂಗುರ ಕಂಡುಬಂದಿದೆ.ಇದನ್ನು ನೋಡಿದ ನೆಟ್ಟಿಗರು ಡಿವೋರ್ಸ್ ಆದರೂ ಉಂಗುರ ಯಾಕೆ ತೆಗೆದಿದಲ್ಲ. ಅಷ್ಟೊಂದು ಪ್ರೀತಿ ಇದ್ದರೆ ಬೇರ್ಪಟ್ಟಿದ್ಯಾಕೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇವರಿಬ್ಬರ ಡಿವೋರ್ಸ್​ಗೆ ಅತ್ತೆಯೇ ಕಾರಣ ಎನ್ನಲಾಗಿದೆ. ಜಯಂ ರವಿ ಅವರ ಅತ್ತೆ ಹಣದ ವಿಚಾರವಾಗಿ ತಗಾದೆ ತೆಗೆಯದೇ ಇದ್ದಿದ್ದರೆ ಅಳಿಯನನ್ನು ಅವಮಾನಿಸದೇ ಇದ್ದಿದ್ದರೆ ಈ ಜೋಡಿ ಇಂದಿಗೂ ಚೆನ್ನಗಿಯೇ ಇರುತ್ತಿದ್ದರು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.