ನ್ಯೂಸ್

ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ 'ಜವಾನ್'​ ಟ್ರೇಲರ್​; ರಿಲೀಸ್​ಗೆ ದಿನಗಣನೆ!

ಮೋಹನ್​ ಶೆಟ್ಟಿ

ಮುಂಬೈ: ಬಾಲಿವುಡ್​ ಚಿತ್ರರಂಗದ ಕಿಂಗ್​ ಖಾನ್​, ಶಾರೂಖ್​ ಖಾನ್​ ನಟನೆಯ ಬಹುನಿರೀಕ್ಷಿತ 'ಜವಾನ್'​ ಚಿತ್ರದ ಟ್ರೇಲರ್​ ಗುರುವಾರ ಅಧಿಕೃತವಾಗಿ ಬಿಡುಗಡೆಗೊಂಡಿತು. ದುಬೈನಲ್ಲಿರುವ ಅತೀ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಮೇಲೆ ಸಿನಿಮಾದ​ ಟ್ರೇಲರ್​ ಅನಾವರಣಗೊಳಿಸಿದ ಶಾರೂಖ್​, ಅಭಿಮಾನಿಗಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು.

ಅಟ್ಲಿ ನಿರ್ದೇಶನದಲ್ಲಿ ತಯಾರಾಗಿರು 'ಜವಾನ್' ಚಿತ್ರ ಸದ್ಯ ಬಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಿನಿಮಾದ ಬಗ್ಗೆ ದಿನದಿಂದ ದಿನಕ್ಕೆ ಕಾತರ ಹೆಚ್ಚುತ್ತಿದ್ದು, ಚಿತ್ರ ಬಿಡುಗಡೆಯತ್ತ ಫ್ಯಾನ್ಸ್​ ಚಿತ್ತ ಮೂಡಿದೆ. ಆಕ್ಷನ್ ಜಾನರ್​ನ ಈ ಸಿನಿಮಾದಲ್ಲಿ ಶಾರುಖ್ ಖಾನ್​ಗೆ ನಾಯಕಿಯಾಗಿ ನಟಿ ನಯನತಾರಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್​ನಡಿ ನಿರ್ಮಾಣವಾದ ಚಿತ್ರ ಸೆಪ್ಟಂಬರ್​ 07, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಮಣಿ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).