'ಜವಾನ್' ಸಿನಿಮಾ ಬಿಡುಗಡೆಯಾದ ಐದನೇ ದಿನದಂದು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಭಾರತದಲ್ಲಿ ಯಶಸ್ವಿಯಾಗಿ 300 ಕೋಟಿ ಕ್ಲಬ್ ಪ್ರವೇಶಿಸಿತ್ತು. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಇದೀಗ 30ನೇ ದಿನಕ್ಕೆ ಜವಾನ್ ಸಿನಿಮಾ ವಿಶ್ವಾದ್ಯಂತ 1100 ಕೋಟಿ ಗಳಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ.
ಅಟ್ಲಿ ನಿರ್ದೇಶನದ ಜವಾನ್, ಬಿಡುಗಡೆಯಾದ ಐದು ದಿನಗಳ ನಂತರ ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ 300 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ. ವರದಿ ಪ್ರಕಾರ, ಆಕ್ಷನ್ ಥ್ರಿಲ್ಲರ್ ಈ ವರ್ಷ ಭಾರತದಲ್ಲಿ 300 ಕೋಟಿ ದಾಟಿದ ಮೂರನೇ ಹಿಂದಿ ಚಿತ್ರವಾಗಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜವಾನ್ ಕಳೆದ ವಾರ ಗುರುವಾರ ರಿಲೀಸ್ ಆಯ್ತು.
ಶಾರುಖ್ ಖಾನ್ ಅಭಿನಯದ ಚಿತ್ರವು ಹೆಚ್ಚಿನ ಅಭಿಮಾನಿಗಳ ನಡುವೆ ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಅಂದಿನಿಂದ, ಅಟ್ಲಿ ನಿರ್ದೇಶನದ ಮತ್ತು ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವು ಬಿಡುಗಡೆಯಾದಾಗಿನಿಂದ ಭಾರೀ ವ್ಯಾಪಾರವನ್ನು ಮಾಡುತ್ತಿದೆ. ಇದೀಗ ಹೊಸ ಮೈಲಿಗಲ್ಲನ್ನು ತಲುಪಿದೆ.
‘ಜವಾನ್’ ಹೊಸ ಮೈಲಿಗಲ್ಲು ತಲುಪಿದೆ. ಶಾರುಕ್ ಅಭಿನಯದ ಈ ಚಿತ್ರ ಈಗ ವಿಶ್ವದಾದ್ಯಂತ 1100 ಕೋಟಿ ರೂ.ಗಳನ್ನು ದಾಟಿದೆ. ಚಿತ್ರದ ಒಟ್ಟು ಕಲೆಕ್ಷನ್ 1103.27 ಕೋಟಿ ರೂ. ಆಗಿದೆ.
ಭಾರತದಲ್ಲಿ ಒಟ್ಟು ಸಂಗ್ರಹವು 619.92 ಕೋಟಿ ರೂಪಾಯಿಗಳಾಗಿದ್ದು, ಕೇವಲ ಹಿಂದಿ ಭಾಷೆಯಲ್ಲಿ 560.03 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ.