ಮುಂಬೈ: ಸೆ.7 ರಂದು ಜಾಗತಿಕವಾಗಿ ಬಿಡುಗಡೆಗೊಂಡ ಶಾರೂಖ್ ಖಾನ್ ನಟನೆಯ ಜವಾನ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮುಖೇನ ಹೊಸ ದಾಖಲೆಯನ್ನು ನಿರ್ಮಿಸಿದ್ದು, ಚಿತ್ರಮಂದಿರಗಳಲ್ಲಿ ಹೆಚ್ಚಿನ ಪ್ರದರ್ಶನ ಕಾಣುತ್ತಿದೆ. ಸದ್ಯ ಸಿನಿಮಾದ ಗೆಲುವಿನ ಸಂಭ್ರಮದಲ್ಲಿರುವ ಚಿತ್ರದ ನಿರ್ದೇಶಕನಿಗೆ ಇದೀಗ ಹಾಲಿವುಡ್‌ನಿಂದ ಆಫರ್ಗಳು ಒಲಿದು ಬಂದಿವೆ.
ಇದನ್ನೂ ಓದಿ: ಆಟೋ ಚಾಲಕರು ಕರೆದ ಕಡೆಗೆ ಬರಲು ನಿರಾಕರಿಸಿದರೆ, ದುಪ್ಪಟ್ಟು ಬಾಡಿಗೆ ಕೇಳಿದರೆ ದೂರು ನೀಡಿ; 10 ದಿನದಲ್ಲಿ 670 ಕೇಸ್
ಜವಾನ್ ನಿರೀಕ್ಷಿಸಿದಂತೆ ಗೆಲುವನ್ನು ಸಾಧಿಸಿದ್ದು, ಈ ಬಗ್ಗೆ ನಿರ್ದೇಶಕ ಅಟ್ಲೀ ಕುಮಾರ್ ಕೆಲ ಕುತೂಹಲಕಾರಿ ಸಂಗತಿಗಳನ್ನು ಸಿನಿಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಸಿನಿಮಾದ ಬಹುತೇಕ ಸಾಹಸಮಯ ದೃಶ್ಯಗಳನ್ನು ಕೊರಿಯೋಗ್ರಾಫ್ ಮಾಡಲು ಆರು ಅಂತಾರಾಷ್ಟ್ರೀಯ ಸಾಹಸ ನಿರ್ದೇಶಕರು ಕೈಜೋಡಿಸಿದ್ದರು ಎಂದು ಅಟ್ಲೀ ಬಹಿರಂಗಪಡಿಸಿದರು.
“ನಮ್ಮ ಸಿನಿಮಾದಲ್ಲಿ ಕೆಲಸ ಮಾಡಿದವರು ಹಾಲಿವುಡ್‌ನಿಂದ ಬಂದವರು. ಆಕ್ಷನ್ಗೆ ಹೆಸರುವಾಸಿಯಾದ ನಿರ್ದೇಶಕ ಸ್ಪಿರೋ ರಜಾಟೋಸ್ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ. ಆದ್ದರಿಂದ, ಸ್ಪೈರೊ ಮತ್ತು ಹಾಲಿವುಡ್‌ನ ಇತರ ಶ್ರೇಷ್ಠ ನಿರ್ದೇಶಕರು ಹಾಗೂ ತಂತ್ರಜ್ಞರು ನಮ್ಮ ಸಿನಿಮಾವನ್ನು ವೀಕ್ಷಿಸಿದರು" ಎಂದು ಅಟ್ಲೀ ಹೇಳಿದರು.
ಶಾರೂಖ್ ಅವರು ಜ್ವಾಲೆಯಲ್ಲಿ ಮುಳುಗಿದ ದೃಶ್ಯವು ನಿರ್ದೇಶಕರ ದೃಷ್ಟಿ ಮತ್ತು ಅವರು ಅದನ್ನು ಕಾರ್ಯಗತಗೊಳಿಸಿದರು ಎಂದು ಹೇಳಿದ ಸ್ಪಿರೋ, ನೀವು ಹಾಲಿವುಡ್‌ನಲ್ಲಿ ಕೆಲಸ ಮಾಡಲು ಬಯಸಿದರೆ, ನಮಗೆ ತಿಳಿಸಿ ಎಂದು ಹೇಳಿದ್ದಾರೆ. ಈ ಮೂಲಕ ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಆಫರ್ ಅನ್ನು ಖ್ಯಾತ ತಂತ್ರಜ್ಞರು ನೀಡಿರುವ ಬಗ್ಗೆ ಅಟ್ಲೀ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ,(ಏಜೆನ್ಸೀಸ್).