ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಮುಖ ಸಂಸ್ಥೆಯಾದ, ಪುದುಚೆರಿಯ ಜವಾಹರ್ಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್ (ಜೆಐಪಿಎಂಇಆರ್) ನಲ್ಲಿ ಬೋಧಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅನಾಟಮಿ, ಬಯೋಕೆಮಿಸ್ಟ್ರಿ, ಫಿಸಿಯಾಲಜಿ, ಪೆಥಾಲಜಿ ಮತ್ತು ಲ್ಯಾಬ್ ಮೆಡಿಸಿನ್, ಫಾರ್ಮಾಕೋಲಜಿ, ಕಮ್ಯೂನಿಟಿ ಆ್ಯಂಡ್ ಫ್ಯಾಮಿಲಿ ಮೆಡಿಸಿನ್, ಫೊರೆನ್ಸಿಕ್ ಮೆಡಿಸಿನ್ ಆ್ಯಂಡ್ ಟಾಕ್ಸಿಕೋಲಜಿ, ಮೈಕ್ರೋಬಯಾಲಜಿ, ಪೀಡಿಯಾಟ್ರಿಕ್ಸ್, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಒಬಿಜಿ, ಒಪ್ತಲ್ಮಾಲಜಿ, ಆಥೋರ್ಪೆಡಿಕ್ಸ್, ಇಎನ್ಟಿ, ರೇಡಿಯೋಡಯಾಗ್ನಸಿಸ್ ವಿಭಾಗಗಳಲ್ಲಿ
ಪ್ರಾಧ್ಯಾಪಕ &6, ಹೆಚ್ಚುವರಿ ಪ್ರಾಧ್ಯಾಪಕ&13, ಸಹ ಪ್ರಾಧ್ಯಾಪಕ&11 ಹಾಗೂ ಸಹಾಯಕ ಪ್ರಾಧ್ಯಾಪಕ & &23 ಹುದ್ದೆಗಳಿವೆ.
ವೈದ್ಯಕೀಯ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟೋರಲ್ ಪದವಿ ಆಗಿರಬೇಕು. ಬೋಧನೆ ಹಾಗೂ ಸಂಶೋಧನಾ ಅನುಭವ ಹೊಂದಿರಬೇಕು. ಗುತ್ತಿಗೆ ಅವಧಿ 11 ತಿಂಗಳು. ಮಾಸಿಕ ಗೌರವ ಧನ ಪ್ರಾಧ್ಯಾಪಕ ಹುದ್ದೆಗೆ 2,20,000 ರೂ., ಹೆಚ್ಚುವರಿ ಪ್ರಾಧ್ಯಾಪಕ ಹುದ್ದೆಗೆ 2 ಲಕ್ಷ ರೂ., ಸಹ ಪ್ರಾಧ್ಯಾಪಕ ಹುದ್ದೆಗೆ 1,88,000 ರೂ. ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ 1,42,506 ಇರುತ್ತದೆ.
ವಯೋಮಿತಿ ಪ್ರಾಧ್ಯಾಪಕ ಹಾಗೂ ಹೆಚ್ಚುವರಿ ಪ್ರಾಧ್ಯಾಪಕ ಹುದ್ದೆಗೆ 58 ವರ್ಷ ಹಾಗೂ ಇನ್ನುಳಿದ ಹುದ್ದೆಗಳಿಗೆ 50 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದ್ದು, ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋ ಸಡಿಲಿಕೆ ಇದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಶನ ನಡೆಸಲಾಗುತ್ತದೆ. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂ ಹಾಗೂ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 250 ರೂ.
ಅರ್ಜಿ ಶುಲ್ಕವಿರುತ್ತದೆ. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯ ಅಜಿರ್ಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಏಪ್ರಿಲ್ 27 ರೊಳಗೆ ಕಳುಹಿಸಬಹುದು.