ನ್ಯೂಸ್

10 ವರ್ಷಗಳಿಂದ ಹಣ ಕೂಡಿಟ್ಟು ಖರೀದಿಸಿದ್ದ 2.5 ಕೋಟಿ ರೂ. ಮೌಲ್ಯದ ಫೆರಾರಿ 10 ನಿಮಿಷಗಳಲ್ಲಿ ಸುಟ್ಟು ಭಸ್ಮ! Ferrari Burns

ಜಪಾನ್​​ :  ( Ferrari Burns  )ಜಪಾನ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಹತ್ತು ವರ್ಷಗಳ ಉಳಿತಾಯ ಹಣದಿಂದ ಫೆರಾರಿ ಕಾರನ್ನು ಖರೀದಿಸಿ, ಒಂದು ಗಂಟೆಯೊಳಗೆ ಅದು ಸುಟ್ಟುಹೋದ ಘಟನೆ ಟೋಕಿಯೋದಲ್ಲಿ ನಡೆದಿದೆ. ಈ ಅವಘಡದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿವೆ.

ಜಪಾನಿನ ಸಂಗೀತ ನಿರ್ಮಾಪಕ ಹಾಂಗ್‌ಕಾನ್‌ 10 ವರ್ಷ ಕಾದು 2.5 ಕೋಟಿ ರೂಪಾಯಿ ಕೊಟ್ಟು ಹಾಂಗ್ ಕಾಂಗ್ ತನ್ನ ಫೆರಾರಿ ಕಾರನ್ನು ಖರೀದಿಸಿದ್ದರು. ವಾಹನ ತಲುಪಿದ ನಂತರ ಕೇವಲ 20 ನಿಮಿಷಗಳ ಕಾಲ ಮಾತ್ರ ರಸ್ತೆಯಲ್ಲಿತ್ತು. ಜಪಾನ್‌ನ ಶುಟೊ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಹಾಂಗ್ ಕಾಂಗ್ ವಾಹನ ಚಲಾಯಿಸುವಾಗ ಬೆಂಕಿಯನ್ನು ನೋಡಿ, ಕಾರನ್ನು ನಿಲ್ಲಿಸಿ ಬೇಗನೆ ಹೊರಬಂದಿದ್ದರಿಂದ ಬೇರೆ ಯಾವುದೇ ಅಪಘಾತ ಸಂಭವಿಸಲಿಲ್ಲ.

20 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಲಾಯಿತು. ಆದರೆ ಆ ಹೊತ್ತಿಗೆ, ಮುಂಭಾಗದ ಬಂಪರ್‌ನ ಒಂದು ಸಣ್ಣ ಭಾಗವನ್ನು ಹೊರತುಪಡಿಸಿ, ಬಹುತೇಕ ಇಡೀ ಕಾರು ಸುಟ್ಟುಹೋಗಿತ್ತು. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ,  ಫೆರಾರಿ ಹೊಂದುವ ಕನಸು ಕಂಡಿದ್ದರು ಮತ್ತು ಆ ಕನಸು ನನಸಾದ ಕೆಲವೇ ಕ್ಷಣಗಳಲ್ಲಿ ದುಃಸ್ವಪ್ನವಾಗಿ ಬದಲಾಯಿತು. ಜಪಾನ್‌ನಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿರುವ ಏಕೈಕ ವ್ಯಕ್ತಿ ನಾನೇ ಎಂದು ನನಗೆ ಖಚಿತವಾಗಿದೆ ಎಂದು ಹಾಂಗ್ ಕಾಂಗ್ ಎಕ್ಸ್‌ಪ್ರೆಸ್ ಬರೆದಿದೆ. ಘಟನೆಯ ಕುರಿತು ಮೆಟ್ರೋಪಾಲಿಟನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ  ಅವಘಡದ ಫೋಟೋ ಹಾ ಗೂ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿವೆ.