ನ್ಯೂಸ್

ಜಪಾನ್​ನಲ್ಲೂ ಯಮರೂಪಿಯಾದ ಕೊರೊನಾ ವೈರಸ್​: COVID-19 ದಾಳಿಗೆ ದೇಶದಲ್ಲಿ ಮೊದಲ ಸಾವು

Mandara

ಟೋಕಿಯೋ: ಚೀನಾದಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್​ (COVID-19) ಜಪಾನ್​ನಲ್ಲಿಯೂ ಕಂಡುಬಂದಿದ್ದು, ದೇಶದ ಟೋಕಿಯೋದಲ್ಲಿ ವೈರಸ್​ನಿಂದಾಗಿ ಮೊದಲ ಸಾವು ಸಂಭವಿಸಿದೆ.

ಟೋಕಿಯೋದ ಗಡಿಭಾಗದಲ್ಲಿರುವ ಕನಗಾವ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದ 80ರ ಹರೆಯದ ವೃದ್ಧೆ ಕೊರೊನಾ ವೈರಸ್​ನಿಂದಾಗಿ ಮೃತ ಪಟ್ಟಿರುವುದಾಗಿ ಜಪಾನ್​ನ ಆರೋಗ್ಯ ಸಚಿವ ಕಟ್ಸುನೊನು ಕ್ಯಾಟೊ ತಿಳಿಸಿದ್ದಾರೆ.

ಚೀನಾದಲ್ಲಿ ಕೊರೊನಾ ವೈರಸ್​ ದಾಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬುಧವಾರ ಒಂದೇ ದಿನದಲ್ಲಿ ಕನಿಷ್ಟ 254 ಜನರು ಸಾವನ್ನಪ್ಪಿರುವುದು ವರದಿಯಾಗಿದೆ. (ಏಜೆನ್ಸೀಸ್​)