ಬೆಂಗಳೂರು: ಸಿಇಟಿಯಲ್ಲಿ ಜಿನವಾರ ಪ್ರಕರಣದಿಂದ ಪರೀಕ್ಷೆ ವಂಚಿತರಾದ ಅಭ್ಯರ್ಥಿಯು ರಸಾಯನಶಾಸ ಮತ್ತು ಭೌತಶಾಸದಲ್ಲಿನ ಅಂಕಗಳ ಆಧಾರದಲ್ಲಿ ಗಣಿತ ಪರೀಕ್ಷೆಯ ಅಂಕ ನೀಡುವಂತೆ ವಿದ್ಯಾರ್ಥಿಯು ಸರ್ಕಾರಕ್ಕೆ ತಿಳಿಸಿದ್ದಾನೆ.
ಬೀದರ್‌ನ ವಿದ್ಯಾರ್ಥಿಯು ಜನಿವಾರ ಧರಿಸಿದ್ದರಿಂದ ಗಣಿತ ಪರೀಕ್ಷೆಯಿಂದ ವಂಚಿತರಾಗಿದ್ದ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಚಿವೃತ್ ಕುಲಕರ್ಣಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಅಥವಾ ಈಗಾಗಲೇ ಪರೀಕ್ಷೆ ಬರೆದಿರುವ ರಾಸಾಯನಶಾಸ ಮತ್ತು ಭೌತಶಾಸದಲ್ಲಿ ಪಡೆಯುವ ಅಂಕದ ಆಧಾರದಲ್ಲಿ ಗಣಿತ ಅಂಕಗಳನ್ನು ನಿಗದಿ ಮಾಡಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿತ್ತು.
ಈ ವಿಚಾರವನ್ನು ಇಲಾಖೆ ಅಧಿಕಾರಿಗಳು ವಿದ್ಯಾರ್ಥಿ ಮತ್ತು ಪಾಲಕರಿಗೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿಯ ಪಾಲಕರು, ವಿದ್ಯಾರ್ಥಿಯು ಮತ್ತೊಮ್ಮೆ ಸಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸಿ ಪರೀಕ್ಷೆ ಬರೆಯುವುದು ಕಷ್ಟ. ಮೊದಲ ಬಾರಿ ಸಿದ್ಧತೆ ನಡೆಸಿದಂತೆ, ಮತ್ತೊಮ್ಮೆ ಕಷ್ಟವಾಗಲಿದೆ. ಹೀಗಾಗಿ, ಇನ್ನುಳಿದ ಎರಡು ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ಗಣಿತಕ್ಕೆ ಅಂಕಗಳನ್ನು ನೀಡುವಂತೆ ತಿಳಿಸಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಇನ್ನುಳಿದ ಎರಡು ಪರೀಕ್ಷೆಗಳ ಆಧಾರದಲ್ಲಿ ಗಣಿತ ಪರೀಕ್ಷೆಗೆ ಅಂಕ ನೀಡುವಂತೆ ತಿಳಿಸಲಾಗಿದೆ ಎಂಬ ವಿಷಯವನ್ನು ಲಿಖಿತವಾಗಿ ಬರೆದುಕೊಡುವಂತೆ ವಿದ್ಯಾರ್ಥಿಗೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.