ನ್ಯೂಸ್

ತೆಲುಗಿನಲ್ಲಿ ಜಾಹ್ನವಿಗೆ ಮತ್ತೊಂದು ಬಂಪರ್ ಚಾನ್ಸ್​.. ಆ ಬಿಗ್​ಸ್ಟಾರ್ ಎದುರು ಶ್ರೀದೇವಿ ಪುತ್ರಿ ಹೀರೋಯಿನ್​!

ಮುಂಬೈ: ಜಾಹ್ನವಿ ಕಪೂರ್ ಸದ್ಯ ಸೌತ್ ಫಿಲ್ಮ್ ಇಂಡಸ್ಟ್ರಿಯತ್ತ ಗಮನ ಹರಿಸಿದ್ದಾರೆ. ಅಮ್ಮ ಶ್ರೀದೇವಿಯಂತೆ ತಾನೂ ಸಹ ಖ್ಯಾತಿ ಗಳಿಸಬೇಕೆಂಬ ಉದ್ದೇಶ ಹೊಂದಿರುವ ಈ ಚೆಲುವೆಗೆ ತೆಲುಗು ಚಿತ್ರರಂಗದ ಸೂಪರ್​ ಸ್ಟಾರ್​ಗಳಾದ ಎನ್‌ಟಿಆರ್ ಮತ್ತು ರಾಮ್ ಚರಣ್ ಎದುರು ನಟಿಸುವ ಯೋಗ ಒದಗಿ ಬಂದಿದೆ. ಇದೀಗ ಇದರ ಬೆನ್ನಲ್ಲೇ ಮತ್ತೊಬ್ಬ ಪ್ರಮುಖ ನಾಯಕನ ಚಿತ್ರದಲ್ಲಿ ಅವಕಾಶ ಸಿಗಲಿದೆ ಎಂದು ವರದಿಯಾಗಿದೆ.

ಅತಿಲೋಕಸುಂದರಿ ಶ್ರೀದೇವಿ ಸಹ ತೆಲುಗು ಚಿತ್ರರಂಗವನ್ನು ಆಳಿದ್ದು, ಅವರದೇ ಹಾದಿ ತುಳಿದಿರುವ ಪುತ್ರಿ ಜಾಹ್ನವಿ ಹಿಂದಿ ಚಿತ್ರರಂಗಕ್ಕೆ ಬದಲಾಗಿ ಟಾಲಿವುಡ್​ ಕಡೆಯೇ ವಾಲಿದಂತಿದೆ. ಅದಕ್ಕಾಗಿಯೇ ಅವರು ಎನ್‌ಟಿಆರ್ ನಾಯಕನಾಗಿ ನಟಿಸಿದ 'ದೇವರ' ಚಿತ್ರದ ಮೂಲಕ ಸೌತ್ ಚಿತ್ರರಂಗದತ್ತ ಗಮನ ಹರಿಸಿದರು. ಚಿತ್ರ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ನಟಿಸುತ್ತಿರುವಾಗಲೇ ಜಾಹ್ನವಿಗೆ ರಾಮ್ ಚರಣ್ ಮತ್ತು ಬುಚ್ಚಿಬಾಬು ಅವರ ದೊಡ್ಡ ಪ್ರಾಜೆಕ್ಟ್‌ನಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತು. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

ಇದಲ್ಲದೆ ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಬಿಗ್ ಪ್ರಾಜೆಕ್ಟ್‌ನಲ್ಲಿ ಜಾಹ್ನವಿಯನ್ನು ನಾಯಕಿಯಾಗಿ ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ. ಮಹೇಶ್ ಬಾಬು ಕೂಡ ಶ್ರೀದೇವಿಯ ಕಟ್ಟಾ ಅಭಿಮಾನಿ. ಮತ್ತು ರಾಜಮೌಳಿ ಜಾನ್ವಿ ಕಪೂರ್ ಅವರನ್ನು ತಮ್ಮ ಚಿತ್ರದ ಭಾಗವಾಗಿ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಈ ಪ್ರಾಜೆಕ್ಟ್‌ನಲ್ಲಿ ಜಾಹ್ನವಿ ನಟನೆಯ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.

ಮತ್ತೊಂದೆಡೆ, ಜಾಹ್ನವಿ, ಪ್ರಭಾಸ್ ಮತ್ತು ಹನು ರಾಘವಪುಡಿ ಯೋಜನೆಯ ಭಾಗವಾಗಲಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆಯಾಗಿ, ಜಾಹ್ನವಿ ಸತತವಾಗಿ ತೆಲುಗು ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ಯಾನ್ ಇಂಡಿಯಾ ನಾಯಕಿಯಾಗಿ ಹೊರಹೊಮ್ಮಿದರೂ ಆಶ್ಚರ್ಯಪಡಬೇಕಿಲ್ಲ.