ಮುಂಬೈ: ಬಾಲಿವುಡ್ನ ಸ್ಟಾರ್ ಕಿಡ್ ಆಗಿರುವ ಜಾನ್ವಿ ಕಪೂರ್ , ಖುಷಿ ಕಪೂರ್. ಅಕ್ಕ-ತಂಗಿ ಇಬ್ಬರ ನಡುವೆ ಜಗಳ ನಡೆದಿದೆ. ಇಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಕ್ಷಮೆಯಾಚಿಸಿದ್ದಾರೆ. ಅಕ್ಕ- ತಂಗಿಯ ಮುನಿಸು ಕಂಡು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಜಾನ್ವಿ ಕಪೂರ್ ಅವರಂತೆ, ಅವರ ಸಹೋದರಿ ಖುಷಿ ಕಪೂರ್ ಕೂಡ ಸೋಷಿಯಲ್ ಮೀಡಿಯಾ ಸಖತ್ ಆಕ್ಟೀವ್ ಆಗಿದ್ದಾರೆ. ಇಬ್ಬರೂ ಸಹೋದರಿಯರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪೋಸ್ಟ್‌ಗಳಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ. ಈಗ ಇತ್ತೀಚೆಗೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ನಡುವಿನ ಸಂಭಾಷಣೆ ವೈರಲ್ ಆಗುತ್ತಿದೆ. ಈ ಸಂಭಾಷಣೆಯಲ್ಲಿ ಇಬ್ಬರ ನಡುವೆ ತೀವ್ರ ಜಗಳ ನಡೆದಿರುವುದು ಬೆಳಕಿಗೆ ಬಂದಿದೆ.
ಖುಷಿ ಕಪೂರ್ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳನ್ನು ನೋಡಿದ ನಂತರ, ಸಹೋದರಿ ಖುಷಿಯ ಈ ಪೋಸ್ಟ್‌ಗೆ ಜಾನ್ವಿ ಕಪೂರ್ ಪ್ರತಿಕ್ರಿಯಿಸಿ, 'ನಾನು ನಿನ್ನನ್ನು ತುಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕ್ಷಮಿಸಿ, ನಾನು ನಿಮ್ಮೊಂದಿಗೆ ಜಗಳವಾಡಿದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ.ಎಂದು ಬರೆದುಕೊಂಡಿದ್ದಾರೆ' ಇದಕ್ಕೆ ಪ್ರತಿಕ್ರಿಯಿಸಿದ ಖುಷಿ ಕಪೂರ್, 'ಮಿಸ್ ಯು ಲವ್ ಯೂ, ದಯವಿಟ್ಟು ನನ್ನನ್ನು ಕ್ಷಮಿಸಿ...' ಎಂದು ಬರೆದುಕೊಂಡಿದ್ದು, ಸಹೋದರಿಯರಿಬ್ಬರೂ ಜಗಳವನ್ನು ಸಾರ್ವಜನಿಕವಾಗಿ ಮಾತನಾಡಿ ಬರೆಗರಿಸಿಕೊಂಡಿದ್ದಾರೆ.
ಇಬ್ಬರ ನಡುವಿನ ಈ ಜಗಳ ಅವರ ನಡುವೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸುತ್ತಿದೆ. ಜಗಳದ ನಂತರ ಒಬ್ಬರನ್ನೊಬ್ಬರು ಒಪ್ಪಿಸುವಲ್ಲಿ ಹಿಂದೆ ಬೀಳುವುದಿಲ್ಲ. ಇಬ್ಬರಿಗೂ ಜಗಳನಾ? ಅಂತೂ ಜಗಳ ಮುಗಿತಲ್ಲ ಬಿಡಿ... ಇಬ್ಬರೂ ಹೀಗೆ ಇರಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಜಾನ್ವಿ ಕಪೂರ್ 'ದೇವ್ರಾ' ಮತ್ತು 'ಮಿಸ್ಟರ್ ಅಂಡ್ ಮಿಸಸ್ ಮಹಿ' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯದಾಗಿ 'ಬಾವಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, ಅವರು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.