ನ್ಯೂಸ್

ಯಾರನ್ನೋ ಸೋಲಿಸಲು ನಾನು ಪಕ್ಷ ಕಟ್ಟಿಲ್ಲ, ಎದುರಾಳಿ ಯಾರು ಅನ್ನೋದನ್ನ ನಾನು ಯೋಚನೆ ಮಾಡಲ್ಲ!

ವಿಜಯಪುರ : ಯಾರನ್ನೋ ಸೋಲಿಸಲು ನಾನು ಪಕ್ಷ ಕಟ್ಟಿಲ್ಲ.ಗೆಲ್ಲುವ ಕಡೆಗಳಲ್ಲಿ ಮಾತ್ರ ಹೆಜ್ಜೆ ಇಡುತ್ತಿದ್ದೇನೆ. ಎದುರಾಳಿ ಯಾರು ಅನ್ನೋದನ್ನ ನಾನು ಯೋಚನೆ ಮಾಡುವುದಿಲ್ಲವೆಂದು ವಿಜಯಪುರದಲ್ಲಿ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಬಿಜೆಪಿ ಸೋಲಿಸಲು ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದ್ದಾರೆ ಎನ್ನುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರನ್ನೋ ಸೋಲಿಸಲು ನಾನು ಪಕ್ಷ ಕಟ್ಟಿಲ್ಲ. ಗೆಲ್ಲುವ ಕಡೆಗಳಲ್ಲಿ ಮಾತ್ರ ಹೆಜ್ಜೆ ಇಡುತ್ತಿದ್ದೇನೆ. ಗೆಲ್ಲುವ ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡುತ್ತೇನೆ.ಜನರಿಗೆ ಯಾರ ಮೇಲೆ ನಂಬಿಕೆ‌ ಇದೆ ಅವರಿಗೆ ಮತ ಹಾಕುತ್ತಾರೆ ಎಂದಿದ್ದಾರೆ.

ಜನಾರ್ದನ ರೆಡ್ಡಿ ವಿರುದ್ಧ ವಿಜಯೇಂದ್ರ ಕಣಕ್ಕಿಳಿಸುವ ವಿಚಾರವಾಗಿ ಮಾತನಾಡಿ, ಎದುರಾಳಿ ಯಾರು ಅನ್ನೋದನ್ನ ನಾನು ಯೋಚನೆ ಮಾಡುವುದಿಲ್ಲ. ನನ್ನ ಕೆಲಸ, ನನ್ನ ಹೋರಾಟ ಇದ್ದೆ ಇರುತ್ತದೆ. 30 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. 30 ಕಡೆಗಳಲ್ಲಿ ಗೆಲ್ಲುವ ಭರವಸೆ ಬಂದಿದೆ. ಪಕ್ಷಕ್ಕಾಗಿ ಕೆಲಸ ಮಾಡ್ತೀದ್ದೇವೆ. ಫಲಿತಾಂಶ ದೇವರು ಹಾಗೂ ಜನರ ಕೈಯಲ್ಲಿದೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳಲ್ಲ. ಮುಂದೆ ಇಟ್ಟ ಹೆಜ್ಜೆ ಹಿಂದೆ ತೆಗೆಯುವವನು ಶೂರನು ಅಲ್ಲ, ಧೀರನು ಅಲ್ಲ. ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಬರಲ್ಲ ಎಂದು ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.