ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರುತ್ತಿರುವರ ವಿರುದ್ಧ ಕೊಡ್ಲಿಪೇಟೆ ಮಂಜುನಾಥಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿ ಭಕ್ತಾದಿಗಳ ಸಮಿತಿ ವತಿಯಿಂದ ಆಯೋಜಿಸಿದ್ದ ಜನಾಗ್ರಹ ಜಾಥಾ ನಡೆಸಲಾಯಿತು. 
ನ್ಯೂಸ್

ಕೊಡ್ಲಿಪೇಟೆಯಲ್ಲಿ ಜನಾಗ್ರಹ ಜಾಥಾ

ಶನಿವಾರಸಂತೆ: ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಅಣ್ಣಪ್ಪ ಸ್ವಾಮಿ ಹಿತರಕ್ಷಣಾ ಸಮಿತಿ ಮತ್ತು ಭಕ್ತಾದಿಗಳ ವೃಂದ ಕೊಡ್ಲಿಪೇಟೆ ವತಿಯಿಂದ ಗುರುವಾರ ಕೊಡ್ಲಿಪೇಟೆಯಲ್ಲಿ ಜನಾಗ್ರಹ ಜಾಥಾ ನಡೆಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಾಲಯ ಹಾಗೂ ಶ್ರೀ ಕ್ಷೇತ್ರ ಧರ್ಮಾಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರಲು ಒಳಸಂಚು ಮತ್ತು ಅಪಪ್ರಚಾರ ಮಾಡುತ್ತಿರುವರ ವಿರುದ್ಧ ಕಠಿಣ ಕ್ರಮಕೈಗೊಂಡು ಸೂಕ್ತ ತನಿಖೆ ನಡೆಸುವ ಜಾಥಾದಲ್ಲಿ ಒತ್ತಾಯಿಸಲಾಯಿತು.

ಕೊಡ್ಲಿಪೇಟೆಯ ಕಡೆಪೇಟೆ ಗಣಪತಿ ದೇವಸ್ಥಾನದಿಂದ ಕೊಡ್ಲಿಪೇಟೆ ಬಸ್ ನಿಲ್ದಾಣದವರೆಗೆ ಜಾಥಾ ಮೂಲಕ ಪ್ರತಿಭಟನೆ ನಡೆಸಲಾಯಿತು. ಜನಾಗ್ರಹ ಜಾಥಾದಲ್ಲಿ ಆಯೋಜಕರಾದ ಹರೀಶ್, ಮೋಕ್ಷಿತ್‌ರಾಜ್, ದಯಾನಂದ್, ಆದರ್ಶ, ಅನಿಲ್, ವಿವಿಧ ಮಠಾದೀಶರು ಸೇರಿದಂತೆ ಹಿಂದು ಬಾಂಧವರು, ಸಾರ್ವಜನಿಕರು ಪಾಲ್ಗೊಂಡಿದ್ದರು.