ಬೆಂಗಳೂರು: ನರೇಗಾ ಯೋಜನೆಯಡಿ 10 ಸಾವಿರ ಕೋಟಿ ರೂ. ಇದ್ದು, ಅದನ್ನು ಬಳಸಿ ಅಸಂಘಟಿತ ವಲಯದ ಪ್ರತಿ ಕಾರ್ವಿುಕರಿಗೆ ಕನಿಷ್ಠ 10 ಸಾವಿರ ರೂ. ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಲಾಕ್ಡೌನ್ ಬಳಿಕ ಪ್ರಧಾನಿ ಮೋದಿ ಹಲವು ಬಾರಿ ಮಾತನಾಡಿದ್ದನ್ನು ಗಮನಿಸಿದ್ದೇನೆ. ಆದರೆ, ಅಸಂಘಟಿತ ವಲಯದ ಬಗ್ಗೆ ತುಟಿಪಿಟಿಕ್ ಎಂದಿಲ್ಲ. ಸವಿತಾ ಸಮಾಜದವರು, ಹಮಾಲಿಗಳು, ರ್ದಜಿಗಳು, ಬಡಗಿ, ಕಮ್ಮಾರ, ಕುಂಬಾರ, ಮೀನುಗಾರ ಸಮಾಜದವರು, ಆಟೋ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್ಗಳು ಅನೇಕ ಕಾರ್ವಿುಕ ವಲಯ ಇದೆ. ಇಂತಹ ಸಣ್ಣ ಕಾರ್ವಿುಕರ ಬಗ್ಗೆ ಯಾರೂ ಮಾತನಾಡಿಲ್ಲ. ಇದು ಬಹಳ ನೋವು ತಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಿನ್ನ ನಂಬರ್ ಕೊಡಣ್ಣ: ಕೃಷಿ ಭೂಮಿ ಯಲ್ಲೇ ತರಕಾರಿ, ಹೂವು, ಹಣ್ಣು ನಾಶ ವಾಗುತ್ತಿದೆ. ಈವರೆಗೂ ಅಧಿಕಾರಿಗಳು ಸಮೀಕ್ಷೆ ಮಾಡಿಲ್ಲ. ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳುತ್ತಾರೆ. ‘ಅಣ್ಣಾ, ಬಿ.ಸಿ. ಪಾಟೀಲಣ್ಣ... ನಿನ್ನ ನಂಬರ್ ಕೊಡಣ್ಣ, ಯಾರು ಯಾರಿಗೆ ಗಮನಕ್ಕೆ ತರಬೇಕು’ ಎಂದು ಡಿಕೆಶಿ ಪ್ರಶ್ನಿಸಿದರು.