ನ್ಯೂಸ್

ಜಮ್ಮು&ಕಾಶ್ಮೀರ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ರಾಣೆಬೆನ್ನೂರ: ಜಮ್ಮು&ಕಾಶ್ಮೀರದಲ್ಲಿ ನಡೆದಿರುವ ಉಗ್ರರ ದಾಳಿ ಖಂಡಿಸಿ ಹಾಗೂ ಕೇಂದ್ರ ಸರ್ಕಾರ ಕೂಡಲೇ ಉಗ್ರರನ್ನು ಸೆದೆಬಡಿಯಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಹನುಮಂತಪ್ಪ ಕಬ್ಬಾರ ಮಾತನಾಡಿ, ಜಮ್ಮು&ಕಾಶ್ಮೀರದಲ್ಲಿ ನಡೆದಿರುವ ಕೃತ್ಯ ಅಮಾನವೀಯ. ಉಗ್ರರಿಗೆ ಗುಂಡಿನಲ್ಲಿಯೆ ಉತ್ತರ ಕೊಡಬೇಕು. ಉಗ್ರರ ಅಟ್ಟಹಾಸವನ್ನು ಮುಕ್ತಗೊಳಿಸಬೇಕು. ಜಮ್ಮು&ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಬೇಕು. ಉಗ್ರರ ದಾಳಿಗೆ ಬಲಿಯಾದ ಕುಟುಂಬದವರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಕಿರಣ ಗುಳೇದ, ರಾಜೇಶ ಅಂಗಡಿ, ಮಾಳಪ್ಪ ಪೂಜಾರ, ಸೋಮರೆಡ್ಡಿ ಹಾದಿಮನಿ, ಮಂಜುನಾಥ ಗುಡ್ಡಣ್ಣನವರ, ಮರಿಯಪ್ಪ ಕೊಡ್ಲೇರ, ಮಲ್ಲಪ್ಪ ದೇವರಗುಡ್ಡ, ಪರಮೇಶ ಅರಳಿಕಟ್ಟಿ, ನಿಂಗಪ್ಪ ನಾಡಗೇರ, ಹನುಮಂತಪ್ಪ ಮೂಲಿಮನಿ, ಎ.ಬಿ. ಮಂಜಪ್ಪ, ಚಿಕ್ಕಪ್ಪ ಐಗಳ, ನಿಂಗಪ್ಪ ನಿಂಗನಗೌಡ್ರ ಮತ್ತಿತರರು ಪಾಲ್ಗೊಂಡಿದ್ದರು.