ನ್ಯೂಸ್

ಶತಕೋಟಿ ಖಾತೆಗೆ ಜೇಮ್ಸ್​; ನಾಲ್ಕೇ ದಿನದಲ್ಲಿ ದಾಖಲೆ ಬರೆದ ಅಪ್ಪು ಚಿತ್ರ

ಬೆಂಗಳೂರು: ‘ಜೇಮ್ಸ್​’ ಚಿತ್ರದ ಮೊದಲ ದಿನದ ಗಳಿಕೆೆ 25ರಿಂದ 30 ಕೋಟಿ ರೂ.ವರೆಗೂ ಆಗಬಹುದು ಎಂದಾಗಲೇ, ಭಾನುವಾರ ಮುಗಿಯುವ ಹೊತ್ತಿಗೆ ಜಗತ್ತಿನಾದ್ಯಂತ 100 ಕೋಟಿ ರೂ. ಸಂಗ್ರಹ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಈ ಮೂಲಕ ಅತೀ ಕಡಿಮೆ ಸಮಯದಲ್ಲಿ 100 ಕೋಟಿ ರೂ. ಕ್ಲಬ್ ಸೇರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದ್ದು, ಮೊದಲ ನಾಲ್ಕು ದಿನಗಳಲ್ಲಿ 110 ಕೋಟಿ ರೂ. ಗಳಿಕೆಯಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿದೆ.ಈ ಕುರಿತು ಮಾತನಾಡುವ ಚಿತ್ರದ ನಿರ್ದೇಶಕ ಚೇತನ್, ‘ನಾಲ್ಕು ದಿನಗಳಿಗೆ ಎಲ್ಲ ಭಾಷೆಗಳಿಂದ ಸೇರಿಸಿ ಜಗತ್ತಿನಾದ್ಯಂತ 100 ಪ್ಲಸ್ ಕೋಟಿ ರೂ. ಗಳಿಕೆ ಆಗಿದೆ. ನಾಲ್ಕು ದಿನಗಳಲ್ಲಿ 100 ಕೋಟಿ ರೂ. ಗಳಿಕೆ ಮಾಡುವ ಮೂಲಕ 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತೀ ಕಡಿಮೆ ಸಮಯದಲ್ಲಿ ಅಷ್ಟೊಂದು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುರುವಾರ ಏನು ಕಲೆಕ್ಷನ್ ಆಗಿತ್ತೋ, ಅದರ ಶೇ. 90ರಷ್ಟು ಕಲೆಕ್ಷನ್ ಭಾನುವಾರ ಸಹ ಆಗಿದೆ. ಸೋಮವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಆಟಗಳು ಸಹ ಶೇ. 70ರಷ್ಟು ಫುಲ್ ಆಗಿವೆ’ ಎನ್ನುತ್ತಾರೆ ಚೇತನ್.

ಒಂದು ಕಡೆ ಚಿತ್ರ ಒಳ್ಳೆಯ ಗಳಿಕೆ ಕಾಣುತ್ತಿ ದ್ದರೂ ಖುಷಿ ಪಡುವುದಕ್ಕೆ ಆಗುತ್ತಿಲ್ಲ ಎನ್ನುವ ಚೇತನ್, ‘ಇದೊಂದು ವಿಚಿತ್ರ ಅನುಭವ. ಎಲ್ಲ ಕಡೆ ಸಂಭ್ರಮ ಇದೆ. ಆದರೆ, ಖುಷಿಪಡುವುದಕ್ಕೆ ಆಗುತ್ತಿಲ್ಲ. ನಿದ್ದೆಯಲ್ಲೂ ಅಪು್ಪ ಸಾರ್ ನೆನಪಾಗುತ್ತಾರೆ. ಅವರಿಲ್ಲದೆ ಖುಷಿಪಡಬೇಕಾ? ಎಂಬ ಪ್ರಶ್ನೆ ಎದುರಾಗುತ್ತದೆ. ಅವರು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಅಂತ ಅನಿಸುತ್ತದೆ’ ಎನ್ನುತ್ತಾರೆ. ಇನ್ನು, ಈ ಶುಕ್ರವಾರ ‘ಆರ್​ಆರ್​ಆರ್’ ಚಿತ್ರ ಬಿಡುಗಡೆಯಾಗುತ್ತಿದೆ. ಆ ಚಿತ್ರದಿಂದ ‘ಜೇಮ್್ಸ’ ಕಲೆಕ್ಷನ್​ನಲ್ಲಿ ಏನಾದರೂ ವ್ಯತ್ಯಾಸವಾಗಲಿದೆಯಾ? ಎಂಬ ಪ್ರಶ್ನೆ ಸಹಜ. ಈ ಕುರಿತು ಮಾತನಾಡುವ ಅವರು, ‘ಕನ್ನಡ ಸೆಂಟರ್​ಗಳ ಸಮಸ್ಯೆ ಇಲ್ಲ. ಮಲ್ಟಿಪ್ಲೆಕ್ಸ್ ಮತ್ತು ಬೇರೆ ಭಾಷೆಗಳ ಸೆಂಟರ್​ಗಳಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಆದರೂ ಮಲ್ಟಿಪ್ಲೆಕ್ಸ್​ಗಳ ಇತಿಹಾಸದಲ್ಲಿ ‘ಜೇಮ್್ಸ’ ಮಾಡಿದ ಮೊದಲ ವಾರದ ಗಳಿಕೆ ದೊಡ್ಡದು ಮತ್ತು ಮೊದಲನೆಯದು’ ಎನ್ನುತ್ತಾರೆ.