Avatar 3 Review ; ಚಿತ್ರ: ಅವತಾರ್ 3 & ೈರ್ ಆ್ಯಂಡ್ ಆ್ಯಶ್
ನಿರ್ದೇಶನ: ಜೇಮ್ಸ್ ಕ್ಯಾಮರೂನ್
ತಾರಾಗಣ: ಸ್ಯಾಮ್ ವರ್ದಿಂಗ್ಟನ್, ಜೋ ಸಲ್ಡಾನಾ, ಸ್ಟೀನ್ ಲ್ಯಾಂಗ್, ಸಿಗರ್ನಿ ವೀವರ್, ಓನಾ ಚಾಪ್ಲಿನ್, ಕೇಟ್ ವಿನ್ಸ್ಲೆಟ್ ಮತ್ತಿತರರು
ಜೇಮ್ಸ್ ಕ್ಯಾಮರೂನ್ ನಿರ್ದೇಶನದ "ಅವತಾರ್' ಸರಣಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. 2009ರಲ್ಲಿ ಬಿಡುಗಡೆಯಾದ "ಅವತಾರ್' ಮತ್ತು 2022ರಲ್ಲಿ ತೆರೆಗೆ ಬಂದ "ಅವತಾರ್ 2& ದ ವೇ ಆ್ ವಾಟರ್' ಎರಡೂ ಚಿತ್ರಗಳಿಂದ ಸುಮಾರು ಆರು ಸಾವಿರ ಕೋಟಿ ಬಜೆಟ್ ಆಗಿತ್ತು. ಎರಡೂ ಚಿತ್ರಗಳ ಕಲೆಕ್ಷನ್ <50 ಸಾವಿರ ಕೋಟಿ ದಾಟಿತ್ತು. ಆ ಮೂಲಕ ವಿಶ್ವದಲ್ಲೇ ಅತ್ಯಂತ ಯಶಸ್ವಿ ಸರಣಿ ಎನಿಸಿಕೊಂಡಿದೆ. ಇದೀಗ ಸೀಕ್ವೆಲ್ನ ಮೂರು ವರ್ಷಗಳ ನಂತರ ಟ್ರೀಕ್ವೆಲ್ "ಅವತಾರ್ 3& ೈರ್ ಆ್ಯಂಡ್ ಆ್ಯಶ್' ರಿಲೀಸ್ ಆಗಿದೆ. ಹಾಗಾದರೆ ಹೇಗಿದೆ ಈ ಹೊಸ "ಅವತಾರ್'?
ಮೊದಲ ಭಾಗದಲ್ಲಿ ಪೆಂಡೋರಾ ಕಳೆದುಕೊಂಡ ಬಳಿಕ ಜೇಕ್ ಸಲ್ಲಿ (ಸ್ಯಾಮ್) ತನ್ನ ಕುಟುಂಬದ ಜತೆ ಸಾಗರ ಕುಲದವರಾದ ಮೆಟ್ಕಯೀನಾ ಜನರ ಮೊರೆ ಹೋಗಿ, ಅವರ ಜತೆಗೇ ಉಳಿಯುತ್ತಾರೆ. ಆದರೆ, ಕರ್ನಲ್ ಮೈಲ್ಸ್ ಕ್ವಾರಿಚ್ಗೆ (ಸ್ಟೀನ್) ವಿಷಯ ಗೊತ್ತಾಗಿ ಅಲ್ಲಿಯೂ ದಾಳಿ ನಡೆಸುತ್ತಾರೆ. ಹಾಗೇ ನಾವಿ ಮತ್ತು ಮೆಟ್ಕಯೀನಾ ಕುಲದವರು ಪೂಜಿಸುವ ತಿಮಿಂಗಿಲಗಳಂತಿರುವ ಟುಲ್ಕುನ್ಗಳನ್ನು ಜನ ಅಮೃತಕ್ಕಾಗಿ ಬೇಟೆಯಾಡತೊಡಗುತ್ತಾರೆ. ಹೀಗಾಗಿ ಎರಡನೇ "ಅವತಾರ್'ನಲ್ಲೂ ಮನುಷ್ಯ ಮತ್ತು ನಾವಿಗಳ (ಅವತಾರ್) ನಡುವಿನ ಸಂರ್ಷ ಮುಂದುವರಿಯುತ್ತದೆ. ಇದೀಗ ಈ ಸಂರ್ಷ ಮೂರನೇ ಭಾಗದಲ್ಲೂ ಮುಂದುವರಿದಿದ್ದು, ಇಲ್ಲಿ ಕರ್ನಲ್ ಕ್ವಾರಿಚ್ಗೆ ಬೂದಿ ಕುಲದ ಅವತಾರ್ಗಳು ಜತೆಯಾಗಿದ್ದಾರೆ. ಜತೆಗೆ ಅವತಾರ್ಗಳ ಜತೆಗೇ ಉಳಿಯುವ ಪುತ್ರ ಸ್ಪೆ$ಡರ್ನ ವಾಪಸ್ ಕರೆದೊಯ್ಯಲು ಕರ್ನಲ್ ಕ್ವಾರಿಚ್ ಪ್ರಯತ್ನಿಸುತ್ತಾನೆ. ಹೀಗೆ ಮಾನವ ಮತ್ತು ಅವತಾರ್ಗಳ ನಡುವಿನ ಸಂರ್ಷ ಒಂದೆಡೆಯಾದರೆ, ಅವತಾರ್ಗಳ ನಡುವಿನ ಸಂರ್ಷ ಮತ್ತೊಂದೆಡೆ ಹಾಗೂ ಮಾನವರ ನಡುವಿನ ಸಂರ್ಷ ಇನ್ನೊಂದೆಡೆ ನಡೆಯುತ್ತಿರುತ್ತದೆ. ಗೆಳೆತನ, ಪ್ರೀತಿ, ಕುಟುಂಬದ ಮೌಲ್ಯಗಳು ಹೀಗೆ ನೀತಿಪಾಠ ಇಲ್ಲೂ ಮುಂದುವರಿದಿದೆ. ನೀಲಿ ಸಮುದ್ರದ ಆಳದಲ್ಲಿ, ನೀಲಾಕಾಶದಲ್ಲಿ, ನೀಲಿ ಜನರ ಈ ಸುದೀರ್ ಕಥೆ ದೃಶ್ಯವೈಭವದಂತೆಯೇ ಸಾಗುತ್ತದೆ. ಆದರೆ, ಅದ್ಭುತ ಎನ್ನಿಸುವ ಅಂಶಗಳಿಲ್ಲ. ಹೀಗಾಗಿ 197 ನಿಮಿಷಗಳ "ಅವತಾರ್ 3 & ೈರ್ ಆ್ಯಂಡ್ ಆ್ಯಶ್' ದೀರ್, ಸುದೀ ಎನ್ನಿಸುತ್ತದೆ. ಹುಟ್ಟು, ಮರುಹುಟ್ಟುಗಳ ಆಟದ ಈ ಟ್ರೀಕ್ವೆಲ್ನಲ್ಲೂ ಮುಂದುವರಿದಿದೆ. ಒಟ್ಟಾರೆ ಈ ಹೊಸ ಅವತಾರದಲ್ಲೂ ಹೋರಾಟ ಮುಂದುವರಿದಿದ್ದು, ಶತ್ರುಗಳಷ್ಟೇ ಬದಲಾಗಿದ್ದಾರೆ.