ನ್ಯೂಸ್

ಸರ್ಕಾರ ಕೊಲ್ಲಲು ಬಯಸುತ್ತಿದೆ ಎಂದು ಗಲಾಟೆ ಮಾಡಿದ ಜಮಾತಿಗಳು ಕೊನೆಗೂ ಚಿಕಿತ್ಸೆ ಪಡೆಯಲು ಸಮ್ಮತಿಸಿದರು, ಹೇಗಾಯಿತು ಚಮತ್ಕಾರ?

ಅಹಮದಾಬಾದ್​: ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ ಸಭೆಯಲ್ಲಿ ಪಾಲ್ಗೊಂಡು ಕರೊನಾ ಸೋಂಕಿತರಾಗಿರುವ ಜಮಾತಿಗಳು ಚಿಕಿತ್ಸೆ ಪಡೆಯಲು ನಿರಾಕರಿಸಿ, ಸಾಕಷ್ಟು ಗಲಭೆ ಎಬ್ಬಿಸಿದ್ದರು. ಅಲ್ಲದೆ, ಸರ್ಕಾರ ನಮ್ಮನ್ನು ಕೊಲ್ಲುವ ಉದ್ದೇಶ ಹೊಂದಿದೆ ಎಂದು ಆರೋಪಿಸಿ, ಗಲಾಟೆ ಮಾಡುತ್ತಿದ್ದರು.

ಆದರೆ, ಜಿಲ್ಲಾಧಿಕಾರಿ ಕೈಗೊಂಡ ಈ ಕ್ರಮದ ಬಳಿಕ ಅವರೆಲ್ಲರೂ ಚಿಕಿತ್ಸೆ ಪಡೆಯಲು ಸಮ್ಮತಿಸಿದರು. ಹಾಗಾದರೆ, ಈ ಚಮತ್ಕಾರ ಆಗಿದ್ದಾರೂ ಹೇಗೆ? ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮವಾದರೂ ಏನು?

ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡು ಸೋಂಕಿತರಾಗಿರುವವರನ್ನು ದೇಶದೆಲ್ಲಡೆ ಪತ್ತೆ ಮಾಡಿ, ಐಸೋಲೇಷನ್​ಗೆ ಕಳುಹಿಸಲಾಗುತ್ತಿದೆ. ಅಲ್ಲಿ ಅವರು ವೈದ್ಯರು, ನರ್ಸ್​ಗಳೊಂದಿಗೆ ಅಸಭ್ಯವಾಗಿ ವರ್ತಿಸುವ ಸುದ್ದಿ ಸಾಮಾನ್ಯವಾಗುತ್ತಿದೆ. ಅದರಂತೆ ಅಹಮದಾಬಾದ್​ ದರಿಯಾಪುರದ ಸೊಲಾ ಸಿವಿಲ್​ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ 26 ಜಮಾತಿಗಳು ಗಲಾಟೆ ಆರಂಭಿಸಿದ್ದರು.

ವಿಷಯ ತಿಳಿದ ಜಿಲ್ಲಾಧಿಕಾರಿ, ಮುಸ್ಲಿಂ ವೈದ್ಯರನ್ನು ಐಸೋಲೇಷನ್​ ವಾರ್ಡ್​ಗೆ ಕಳುಹಿಸಿ, ಅಂದಾಜು ಒಂದು ಗಂಟೆ ಕೌನ್ಸೆಲಿಂಗ್​ ಕೊಡಿಸಿದರು. ನಿಮ್ಮನ್ನು ಕೊಲ್ಲುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಬದಲಿಗೆ ನಿಮ್ಮೆಲ್ಲರನ್ನೂ ಉಳಿಸಲು ಅದು ಯತ್ನಿಸುತ್ತಿದೆ ಎಂದು ಮುಸ್ಲಿಂ ವೈದ್ಯರು ಜಮಾತಿಗಳಿಗೆ ಮನವರಿಕೆ ಮಾಡಿಕೊಟ್ಟರು. ಆನಂತರದಲ್ಲಿ ಅವರೆಲ್ಲರೂ ಚಿಕಿತ್ಸೆ ಪಡೆಯಲು ಸಮ್ಮತಿಸಿದರು.