ನ್ಯೂಸ್

ಟ್ರಂಪ್ ಕದನ ವಿರಾಮ ಹೇಳಿಕೆ; ಈ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಬೇಕು ಎಂದ ಜೈರಾಮ್ ರಮೇಶ್| Jairam Ramesh

Jairam Ramesh | ಭಾರತ ಮತ್ತು ಪಾಕಿಸ್ತಾನದೊಂದಿಗಿನ ವ್ಯಾಪಾರ ಕಡಿತಗೊಳಿಸುವ ಬೆದರಿಕೆಯೇ ಕದನ ವಿರಾಮಕ್ಕೆ ಕಾರಣವಾಯಿತು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಿರುವ ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ತನ್ನ ಮೌನವನ್ನು ಮುರಿಯುವಂತೆ ಒತ್ತಾಯಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಬೇಕು ಎಂದು ಕಾಂಗ್ರೆಸ್​ ನಾಯಕ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.

ಇನ್ನೂ ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ 3 ದೇಶಗಳಲ್ಲಿ 20 ದಿನಗಳಲ್ಲಿ 9ನೇ ಬಾರಿಗೆ ಟ್ರಂಪ್ ಪುನರಾವರ್ತಿತ ಹೇಳಿಕೆ ನೀಡಿ ಭಾರತ ಮತ್ತು ಪಾಕಿಸ್ತಾನದ ಸಮಾನತೆಯನ್ನು ಪುನರುಚ್ಚರಿಸಲಾಗಿದೆ. ಡೊನಾಲ್ಡ್‌ ಭಾಯ್ 4 ದಿನಗಳ ಭಾರತ-ಪಾಕಿಸ್ತಾನ ಯುದ್ಧವನ್ನು ಹೇಗೆ ನಿಲ್ಲಿಸಿದರು ಎಂಬುದನ್ನು ಪುನರಾವರ್ತಿಸುತ್ತಿದ್ದಾರೆ. ಅಮೆರಿಕದ ಹಸ್ತಕ್ಷೇಪ ಮತ್ತು ಪರಮಾಣು ದಾಳಿಯನ್ನು ತಡೆಯಲು ವ್ಯಾಪಾರ ಸಾಧನವನ್ನು ಬಳಸುವುದನ್ನು ಸೇರಿಸಲಾಗಿದೆ, ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವ ಮೂಲಕ ಸಂಭಾವ್ಯ ಪರಮಾಣು ವಿಪತ್ತನ್ನು ತಪ್ಪಿಸಿದೆ ಎಂದು ಟ್ರಂಪ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ ಬೆನ್ನಲ್ಲೇ ಕಾಂಗ್ರೆಸ್ ನ ಜೈರಾಮ್ ರಮೇಶ್ ಆಕ್ರೋಶ ಹೊರಹಾಕಿದ್ದಾರೆ.

ಅಧ್ಯಕ್ಷ ಟ್ರಂಪ್‌ ಅವರ ವಾಣಿಜ್ಯ ಕಾರ್ಯದರ್ಶಿ ಮೇ 23 ರಂದು ನ್ಯೂಯಾರ್ಕ್ ಮೂಲದ ಅಂತಾರಾಷ್ಟ್ರೀಯ ವ್ಯಾಪಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ನಿಖರವಾಗಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಡೊನಾಲ್ಡ್‌ ಭಾಯ್ ಅವರ ಸ್ನೇಹಿತ ನರೇಂದ್ರ ಮೋದಿ ಅವರು ಸಂಪೂರ್ಣ ಮೌನದಿಂದ ಅವರ ಹೇಳಿಕೆಗಳನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ. ಪ್ರಧಾನಿ ಏಕೆ ಮಾತನಾಡುತ್ತಿಲ್ಲ ಅಥವಾ ಅವರು 50% ಸತ್ಯವನ್ನು ಮಾತನಾಡುತ್ತಿದ್ದಾರೆಯೇ ಎಂದು ಜೈರಾಮ್ ರಮೇಶ್ ಪ್ರಶ್ನೆ ಮಾಡಿದ್ದಾರೆ.