ನ್ಯೂಸ್

ಜೈನ್​ ಅಸೋಸಿಯೇಷನ್​ ಮಂಡಳಿಗೆ ವಜ್ರಕುಮಾರ ಆಯ್ಕೆ

ಹಾವೇರಿ: ಕರ್ನಾಟಕ ಜೈನ್​ ಅಸೋಸಿಯೇಷನ್​ ಹಾವೇರಿ ವಿಭಾಗದ ಕಾರ್ಯಕಾರಿ ಮಂಡಳಿಯ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾವೇರಿ ವಿಭಾಗದಿಂದ (ಹಾವೇರಿ, ಗದಗ, ಉತ್ತರ ಕನ್ನಡ )ಸ್ಪದಿರ್ಸಿದ್ದ ಎಸ್​.ಎ. ವಜ್ರಕುಮಾರ ಬಹುಮತದಿಂದ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಮಂಡಳಿಗೆ ಅಧ್ಯಕ್ಷರಾಗಿ ಜಿತೇಂದ್ರ ಕುಮಾರ ಹಾಗೂ ಅವರ ತಂಡದ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.