ತಮಿಳುನಾಡು: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಧೂಳಿಪಟ ಮಾಡುವಲ್ಲಿ ಯಶಸ್ವಿಯಾಗಿದೆ. ತಮ್ಮ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳಿಗೆ ನುಗ್ಗುತ್ತಿರುವ ಪ್ರೇಕ್ಷಕರು, ಜೈಲರ್ನ ಭರ್ಜರಿ ಯಶಸ್ಸಿಗೆ ಕಾರಣರಾಗಿದ್ದಾರೆ. ಸದ್ಯ ಈ ಮಧ್ಯೆ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಲಭಿಸಿದೆ.
ಬಾಕ್ಸ್ ಆಫೀಸ್ನಲ್ಲಿ ಸಂಚಲನ ಮೂಡಿಸಿರುವ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಇದೀಗ ಒಟಿಟಿ ಫ್ಯಾಟ್ಫಾರ್ಮ್ನಲ್ಲಿ ಶೀಘ್ರವೇ ರಿಲೀಸ್ ಆಗಲಿದೆ ಎಂಬ ವದಂತಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಕಾತರ ವ್ಯಕ್ತಪಡಿಸಿರುವ ತಲೈವಾ ಅಭಿಮಾನಿಗಳು, ಚಿತ್ರದ ಒಟಿಟಿ ಬಿಡುಗಡೆಯತ್ತ ಹೆಚ್ಚು ಗಮನಹರಿಸಿದ್ದಾರೆ.
ಸದ್ಯ ಚಿತ್ರ ತಯಾರಕರು 'ಜೈಲರ್'ನ ಒಟಿಟಿ ಬಿಡುಗಡೆಯನ್ನು ಸನ್ ಎನ್‌ಎಕ್ಸ್‌ಟಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲರಿಗೂ ವೀಕ್ಷಿಸಲು ಅನುಕೂಲವಾಗುವಂತೆ ಮಾಡಲು ಚಿಂತಿಸಿದ್ದು, ಸೆಪ್ಟೆಂಬರ್ 7, 2023 ರಂದು ರಿಲೀಸ್ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Ravikumar Ganiga On Cauvery Issue | ಕಾವೇರಿ ವಿಚಾರದಲ್ಲಿ ಬೆಂಗಳೂರಿಗರು ಈಗಲೇ ಎಚ್ಚೆತ್ತುಕೊಳ್ಳಿ: ರವಿಕುಮಾರ್ ಗಣಿಗ
ಚಿತ್ರದಲ್ಲಿ ತಮನ್ನಾ ಭಾಟಿಯಾ, ಮೋಹನ್‌ಲಾಲ್, ಶಿವರಾಜ್‌ಕುಮಾರ್, ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ಮಿರ್ನಾ ಮೆನನ್, ವಿನಾಯಕನ್, ಸುನೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿ, ಮಿಂಚಿದ್ದಾರೆ,(ಏಜೆನ್ಸೀಸ್).