ಮುಂಬೈ: ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ, ಸೂಪರ್ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಚಿತ್ರವು ಬಿಡುಗಡೆಗೊಂಡ ಮೊದಲ ದಿನದಿಂದಲೂ ಹಲವು ದಾಖಲೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಈ ಹಿಂದಿನ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಬರೆದ ರೆಕಾರ್ಡ್ಗಳನ್ನು ಮುರಿಯುವಲ್ಲಿ ತಲೈವಾ ಚಿತ್ರ ಮುಂದಿದ್ದು, 650 ಕೋಟಿ ರೂ. ಕ್ಲಬ್ ಸೇರುವ ಮೂಲಕ ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಇದನ್ನೂ ಓದಿ: ನಮ್ಮ ಮೆದುಳಿಗಿಂತ ಯಾವ ತಂತ್ರಜ್ಞಾನವೂ ದೊಡ್ಡದಲ್ಲ: ಗ್ರಂಥಾಲಯ ಪಿತಾಮಹನ ಸಂಸ್ಮರಣಾ ದಿನಾಚರಣೆಯಲ್ಲಿ ಬಾಲಕೃಷ್ಣ ಕೆ ಉಪನ್ಯಾಸ
ಆಗಸ್ಟ್ 10 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಆಕ್ಷನ್-ಥ್ರಿಲ್ಲರ್ ಜಾನರ್ನ 'ಜೈಲರ್' ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ದಾಖಲೆಗಳನ್ನು ಬರೆಯಿತು. ಸದ್ಯ ಈ ಚಿತ್ರವು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಬ್ಲಾಕ್‌ಬಸ್ಟರ್ 'ಬಾಹುಬಲಿ 1' ಚಿತ್ರ ಗಳಿಸಿದ್ದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಮುರಿಯುವಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಜೈಲರ್ 650 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ.
ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರ ಒಟ್ಟು 450.80 ಕೋಟಿ ರೂ. ಗಳಿಸಿದ ಜೈಲರ್, ಎರಡನೇ ವಾರದಲ್ಲಿ 124.18 ಕೋಟಿ ರೂ.ಗಳನ್ನು ಗಳಿಸಿತು.
ವಾರ 1: 450.80 ಕೋಟಿ ರೂ.
ವಾರ 2: 124.18 ಕೋಟಿ
ವಾರ 3, ದಿನ 1: 7.67 ಕೋಟಿ ರೂ.
ದಿನ 2: 6.03 ಕೋಟಿ ರೂ.
ದಿನ 3: 8.36 ಕೋಟಿ ರೂ.
ದಿನ 4: 10.25 ಕೋಟಿ ರೂ.
5 ನೇ ದಿನ: 5.12 ಕೋಟಿ ರೂ.
ಒಟ್ಟು 612.41 ಕೋಟಿ ರೂ. ಗಳಿಕೆ ಕಾಣುವ ಮುಖೇನ ಇದೀಗ 650 ಕೋಟಿ ರೂ. ಕ್ಲಬ್ನತ್ತ ಮುನ್ನುಗ್ಗುತ್ತಿದೆ,(ಏಜೆನ್ಸೀಸ್).