‘ಜೈಲರ್’ ಸಿನಿಮಾ ಎರಡನೇ ವಾರವೂ ಭರ್ಜರಿ ಗಳಿಕೆ ಆಗುತ್ತಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಿನಿಮಾದ ಕಲೆಕ್ಷನ್ 450 ಕೋಟಿ ರೂಪಾಯಿ ಆಗಿದೆ ಅನ್ನೋದು ವಿಶೇಷ. ಇನ್ನೂ ಹಲವು ದಿನಗಳ ಕಾಲ ಈ ನಾಗಾಲೋಟ ಮುಂದುವರಿಯಲಿದೆ.
‘ಜೈಲರ್’ ಸಿನಿಮಾ ಆಗಸ್ಟ್ 10ರಂದು ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ ಜೈಲರ್ ಸಿನಿಮಾ 48 ಕೋಟಿ ರೂಪಾಯಿ ಬಾಚಿಕೊಂಡಿತು. ನಂತರದ ದಿನಗಳಲ್ಲೂ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಹಣ ಹರಿದು ಬಂತು. ದಕ್ಷಿಣ ಭಾರತದಲ್ಲಿ ಸಿನಿಮಾ ಪಾರುಪತ್ಯ ಸಾಧಿಸಿದೆ. ಬಾಲಿವುಡ್ ಸಿನಿಮಾಗಳ ಯಶಸ್ಸಿನ ಬಿಸಿ ಈ ಚಿತ್ರಕ್ಕೆ ತಟ್ಟುತ್ತಿಲ್ಲ.
ರಜನಿಕಾಂತ್ ಜೊತೆ ಶಿವರಾಜ್ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಬೇರೆ ಭಾಷೆಗಳಲ್ಲಿ ಸಿನಿಮಾಗೆ ಹೈಪ್ ಸೃಷ್ಟಿ ಆಗೋಕೆ ಇದೂ ಕಾರಣ. ಸದ್ಯ ರಜನಿಕಾಂತ್ ಅವರು ಹಿಮಾಚಲ್ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಆಧ್ಯಾತ್ಮ ಗುರುಗಳನ್ನು ಭೇಟಿ ಮಾಡುತ್ತಿದ್ದಾರೆ.
ಗದರ್ 2’ ಸಿನಿಮಾ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಚಿತ್ರ ಐದು ದಿನಕ್ಕೆ 262 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು, ‘ಒಎಂಜಿ 2’ ಸಿನಿಮಾ ಕೂಡ 100 ಕೋಟಿ ರೂಪಾಯಿ ಗಳಿಸಿದೆ.
ಈ ಚಿತ್ರಗಳು ದಕ್ಷಿಣ ಭಾರತದಲ್ಲಿ ‘ಜೈಲರ್’ ಚಿತ್ರದ ಜೊತೆ ಸ್ಪರ್ಧೆ ನೀಡೋಕೆ ಸಾಧ್ಯವಾಗುತ್ತಿಲ್ಲ. ತಮಿಳು ಮಾತ್ರವಲ್ಲದೆ, ತೆಲುಗು ಭಾಷೆಯಲ್ಲೂ ಸಿನಿಮಾ ಸದ್ದು ಮಾಡುತ್ತಿದೆ.