ನ್ಯೂಸ್

ಜೈಲರ್ ಚಿತ್ರದ ವಿಲನ್ ವಿನಾಯಗ್​​​​​ನನ್ನು ಬಂಧಿಸಿದ ಪೊಲೀಸರು! ಕುಡಿದ ಮತ್ತಿನಲ್ಲಿ ರಂಪಾಟ?

'ಜೈಲರ್' ಸಿನಿಮಾ ನಟ ವಿನಾಯಗನ್ ಅವರನ್ನು ಕೇರಳದ ಕೊಚ್ಚಿಯಲ್ಲಿ ಪಲೀಸರು ಬಂಧಿಸಿದ್ದಾರೆ. ವಿನಾಯಗನ್ ಜೈಲರ್ ಖ್ಯಾತಿಯ ನಟ ಮತ್ತು ಈಗಾಗಲೇ ತಮಿಳಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.


ನಟ ವಿನಾಯಗನ್ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಕುಡಿದು ಗಲಾಟೆ ಮಾಡಿದ ಹಿನ್ನೆಲೆ ಆತನ ವಿರುದ್ಧ ನಿವಾಸಿಗಳಿಂದ ದೂರು ದಾಖಲಾಗಿತ್ತು. ದೂರಿನ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಆತನನ್ನು ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಗೆ ಕರೆದಿದ್ದರು. ವಿಚಾರಣೆಗಾಗಿ ಬಂದ ಅವರು ಠಾಣೆಯಲ್ಲೂ ವಿಚಿತ್ರವಾಗಿ ವರ್ತಿಸಿದ್ದಾರೆ.


ಅಕ್ಟೋಬರ್ 24ರಂದು ಪೊಲೀಸರು ವಿನಾಯಗನ್​ ಅವರನ್ನು ಬಂಧಿಸಿದ್ದು, ಬಂಧನದ ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿರುವ ವಿನಾಯಕನ್ ಟಿಕೆ ಜೈಲರ್ ಸಿನಿಮಾದಲ್ಲಿ ವಿಚಿತ್ರ ವಿಲನ್ ಪಾತ್ರಕ್ಕೆ ತುಂಬಾನೆ ಫೇಮಸ್​​​. ವಿಶಾಲ್ ಅಭಿನಯದ ತಿಮಿರು ಚಿತ್ರದ ಮೂಲಕ ಮೊದಲ ಬಾರಿಗೆ ತಮಿಳಿಗೆ ಪದಾರ್ಪಣೆ ಮಾಡಿದರು.

ಅದರ ನಂತರ, ಅವರು ಸಿಂಬು ಅವರ ಸಿಲಂಬಟ್ಟಂ ಮತ್ತು ಧನುಷ್ ಅವರ ಮರಿಯನ್ ಚಿತ್ರಗಳಲ್ಲಿ ನಟಿಸಿದರು. ಇವೆಲ್ಲವನ್ನೂ ಮೀರಿ ಜೈಲರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಗೆ ವಿಲನ್ ಆಗಿ ನಟಿಸಿ ಖ್ಯಾತಿ ಗಳಿಸಿದವರು ಈ ನಟ. ಸೈಡ್ ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಕಂಪೋಸರ್ ಕೂಡ ಹೌದು.