ಜೈ ತುಳು ಸಿನಿಮಾದ ಶತ ಸಂಭ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ಎಂ. ರೈ, ನಟ, ನಿರ್ದೇಶಕ ರೂಪೇಶ್ ಶೆಟ್ಟಿ, ಉದ್ಯಮಿ ಡಾ.ಆರ್.ಕೆ.ಶೆಟ್ಟಿ, ನಿರ್ಮಾಪಕರಾದ ಮುಗ್ರೋಡಿ ಸುಧಾಕರ ಶೆಟ್ಟಿ, ಅನಿಲ್ ಶೆಟ್ಟಿ, ಮಂಜುನಾಥ ಅತ್ತಾವರ್ ಉಪಸ್ಥಿತರಿದ್ದರು.
- ತುಳು ಸಿನಿಮಾದ ನೂರನೇ ದಿನದ ಸಂಭ್ರಮ
- ಗೌರವ
ಮಂಗಳೂರು: ತುಳು ನಮ್ಮ ಪ್ರಾದೇಶಿಕ ಭಾಷೆಯಾದರೂ ಅದರ ಅಭಿಮಾನದಿಂದ ಸಿನಿಮಾ ನಿರ್ಮಿಸುವ ನಿರ್ಮಾಪಕರು ಕಲಾವಿದರಿಗೆ ಆಸರೆಯಾಗಿದ್ದಾರೆ. ‘ಜೈ’ ಸಿನಿಮಾ ತುಳುಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ಎಂ. ರೈ ಹೇಳಿದರು.
ಮರವೂರಿನ ಶೂಲಿನ್ ಪ್ಯಾಲೇಸ್‌ನಲ್ಲಿ ‘ಜೈ’ ತುಳು ಸಿನಿಮಾದ ನೂರನೇ ದಿನದ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡಿ, ‘ಜೈ’ ಸಹಿತ ನನ್ನ ಚಿತ್ರಗಳು ಜನರ ಆಶೀರ್ವಾದದಿಂದ ಯಶಸ್ವಿಯಾಗಿದೆ. ತುಳು ಸಿನಿಮಾ ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಏರಬೇಕೆಂಬ ಕನಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಭಾರತ್ ಸಿನಿಮಾದ ಬಾಲಕೃಷ್ಣ ಶೆಟ್ಟಿ, ಸುರತ್ಕಲ್ ಸಿನಿ ಗ್ಯಾಲಕ್ಷಿ ಮುಖ್ಯಸ್ಥ ದೀಪಕ್, ಸಿನಿಮಾ ಕ್ಷೇತ್ರದ ವಿವಿಧ ಸಾಧಕರು, ಸಿನಿಮಾಕ್ಕೆ ಸಹಕರಿಸಿದ ಗಣ್ಯರು, ಸಿನಿಮಾ ತಂತ್ರಜ್ಞರು, ಕಲಾವಿದರನ್ನು ಗೌರವಿಸಲಾಯಿತು.
ಹೊಸ ತುಳುಚಿತ್ರ ‘ಬ್ರೊ’: ನಟ ನಿರ್ದೇಶಕ ರೂಪೇಶ್ ಶೆಟ್ಟಿ ಜೈ ಸಿನಿಮಾದ ಶತ ಸಂಭ್ರಮದಲ್ಲಿ ತಮ್ಮ ಮುಂದಿನ ಸಿನಿಮಾ ‘ಬ್ರೊ’ ಎಂಬ ಶೀರ್ಷಿಕೆ ಘೋಷಿಸಿದರು. ಗಿರಿಗಿಟ್, ಗಮ್ಜಾಲ್, ಸರ್ಕಸ್, ಜೈ ಸಿನಿಮಾದ ಮೂಲಕ ಕೋಸ್ಟಲ್‌ವುಡ್ ನಿರ್ದೇಶನಕ್ಕೂ ಸೈ ಎಂದು ಸಾಬೀತುಪಡಿಸಿರುವ ಮತ್ತೆ ನಿರ್ದೇಶಕನಾಗಿ ಮುಂದುವರಿದಿದ್ದಾರೆ.
ಉದ್ಯಮಿ ಡಾ.ಆರ್.ಕೆ.ಶೆಟ್ಟಿ, ನಿರ್ಮಾಪಕರಾದ ಮುಗ್ರೋಡಿ ಸುಧಾಕರ ಶೆಟ್ಟಿ, ಅನಿಲ್ ಶೆಟ್ಟಿ, ಮಂಜುನಾಥ ಅತ್ತಾವರ್, ಸಮಾಜಸೇವಕ ಭಾಸ್ಕರಚಂದ್ರ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ರಜತ್ ಹೆಗ್ಡೆ, ನಟ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಡಾ.ಶಿವಚರಣ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್, ಲೀಲಾಕ್ಷ ಕರ್ಕೇರ, ಲಕ್ಷ್ಮಣ್ ಕುಂದರ್, ಬಾಳ ಜಗನ್ನಾಥ ಶೆಟ್ಟಿ, ಶ್ಯಾಮ್, ನಾರಾಯಣ ಪೂಜಾರಿ, ನಟಿ ಅದ್ವಿತಿ ಶೆಟ್ಟಿ, ನಟ ರಾಜ್‌ದೀಪಕ್ ಶೆಟ್ಟಿ, ನವೀನ್ ಶೆಟ್ಟಿ ಆರ್ಯನ್ಸ್ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.