ನ್ಯೂಸ್

'ಮೋದಿ' ವಿವಾದ, ಕೋಲಾರದಿಂದಲೇ ರಾಹುಲ್ ಗಾಂಧಿ ಹೋರಾಟ; ಏ. 16ರಂದು ಜೈ ಭಾರತ ಸಮಾವೇಶ

ಹಾವೇರಿ: ನೀರವ್ ಮೋದಿ, ಲಲಿತ್ ಮೋದಿಯ ಹೆಸರುಗಳಿಗೆ ಪ್ರಧಾನಿ ಮೋದಿ ಹೆಸರನ್ನು ತಳುಕು ಹಾಕಿ, ಮೋದಿ ಸರ್​ನೇಮ್ ಇರುವವರೆಲ್ಲ ಹಾಗೆಯೇ ಎಂದು ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ಶಿಕ್ಷೆಗೆ ಗುರಿಯಾಗಿ, ಸಂಸದ ಸ್ಥಾನವನ್ನೂ ಕಳೆದುಕೊಂಡ ರಾಹುಲ್ ಗಾಂಧಿ ಇದೀಗ ಅದೇ ವಿಚಾರದಿಂದಲೇ ಹೋರಾಟ ನಡೆಸಲು ಮುಂದಾಗಿದ್ದಾರೆ.

ಹಾವೇರಿಯಲ್ಲಿ ಇಂದು ಕಾಂಗ್ರೆಸ್​ ನಾಯಕ ಸಲೀಂ ಅಹ್ಮದ್ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ. ಕೋಲಾರದಲ್ಲೇ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ರಾಹುಲ್ ಗಾಂಧಿ ಭಾಷಣ ಮಾಡಿದ್ದ ಕೋಲಾರದ ಅದೇ ಜಾಗದಲ್ಲೇ ಏ. 16ರಂದು ಜೈ ಭಾರತ ಸಮಾವೇಶ ಹಮ್ಮಿಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು.

ಬಿಜೆಪಿಯವರು ರಾಹುಲ್ ಗಾಂಧಿಯವರ ವಿರುದ್ಧ ಮಾಡುತ್ತಿರುವ ಷಡ್ಯಂತ್ರದ ವಿರುದ್ಧದ ಹೋರಾಟ ಇದಾಗಿದ್ದು, ಅಂದು ರಾಹುಲ್ ಗಾಂಧಿಯವರೇ ಇದನ್ನು ಉದ್ಘಾಟಿಸಲಿದ್ದಾರೆ. ಅಂದಿನಿಂದ ಮೂರು ದಿನ ರಾಜ್ಯದಲ್ಲಿ ಅವರು ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.