ಬೆಂಗಳೂರು: ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (Bigg Boss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. 11ನೇ ಆವೃತ್ತಿಯ ಬಿಗ್ಬಾಸ್ (Bigg Boss Season-11) ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದು, ಈ ಪೈಕಿ ಸ್ಫರ್ಧಿ ಜಗದೀಶ್ (Jagadish) ಹೆಚ್ಚು ಸದ್ದು ಮಾಡುತ್ತಿದ್ದಾರೆ. ಮೊದಲ ವಾರ ಸ್ಫರ್ಧಿಗಳ ಹಾಗೂ ಬಿಗ್ಬಾಸ್ ಜೊತೆ ಕಿರಿಕ್ ಮಾಡಿಕೊಂಡು ಸುದ್ದಿಯಾಗಿದ್ದ ಜಗದೀಶ್ ಇದೀಗ ಮನೆಯ ಕ್ಯಾಪ್ಟನ್ ಹಂಸಾಗೆ (Hamsa) ಲೈನ್ ಹಾಕುವ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ.
ಕ್ಯಾಪ್ಟನ್ ‘ಐ ಲವ್ ಯು’ ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಪ್ರೋಮೋ (Promo) ನೋಡುವುದಾದರೆ ಜಗದೀಶ್ ಅವರು ಹಂಸಾರ ಹಿಂದೆ ಬಿದ್ದು, ಚುಡಾಯಿಸುತ್ತಿರುವುದನ್ನು ನೋಡಬಹುದಾಗಿದೆ. ಮೊದಲಿಗೆ ಖಾರವಾಗಿ ಪ್ರತಿಕ್ರಿಯಿಸುವ ಹಂಸಾ ಆ ಬಳಿಕ ಮುಂಗಾರು ಮಳೆ ಚಿತ್ರದ ಹನಿಸುತ್ತಿದೆ ಹಾಡಿನ ತುಣುಕನ್ನು ಜಗದೀಶ್ ಅವರ ಜೊತೆ ಸೇರಿ ರಿಕ್ರಿಯೇಟ್ ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: Weather Forecast| ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಐದು ದಿನ ಮಳೆ; Orange, Yellow Alert ಘೋಷಣೆ
ಸೋಮವಾರ (ಅಕ್ಟೋಬರ್ 08) ಪ್ರಸಾರವಾದ ಸಂಚಿಕೆಯಲ್ಲಿ ಮೊದಲಿಗೆ ಹಂಸಾ ಹಾಗೂ ಜಗದೀಶ್ ನಡುವೆ ಮಾತ್ರೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಜಗಳವಾಗುತ್ತದೆ. ಇದಾದ ಬಳಿಕ ಕ್ಯಾಪ್ಟನ್ ಹಂಸಾಗೆ ಟಾರ್ಚರ್ ಕೊಡಬೇಕು ಎಂದು ನಿರ್ಧರಿಸಿದ ಜಗದೀಶ್ ಅವರನ್ನು ನಿರಂತರವಾಗಿ ಗೋಳುಹೊಯ್ದುಕೊಳ್ಳುತ್ತಿದ್ದಾರೆ. ಈ ಕುರಿತಾದ ಫನ್ನಿ ಪ್ರೋಮೋ ಸಖತ್ ವೈರಲ್ ಆಗಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (Bigg Boss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಪಾಪ್ಯೂಲರ್ ಆಗಿದೆ ಎಂದರೆ ತಪ್ಪಾಗಲಾರದು.