ನ್ಯೂಸ್

ಬಿಜೆಪಿ ಹೈಕಮಾಂಡ್‌ಗೆ ಡೆಡ್‌ಲೈನ್ ನೀಡಿದ ಜಗದೀಶ್ ಶೆಟ್ಟರ್! ಮುಜುಗರ ತಪ್ಪಿಸಲು ಕೊಡ್ತಾರಾ ಟಿಕೆಟ್?

Webdesk - Athul Damale

ಬೆಂಗಳೂರು: ಬಿಜೆಪಿ ಈ ಬಾರಿ ಅಭ್ಯರ್ಥ್ಯಿಗಳ ಪಟ್ಟಿಯಲ್ಲಿ ಅನೇಕ ಹಳೆ ನಾಯಕರಿಗೆ ಕೊಕ್ ನೀಡಿದೆ. ಇದರಿಂದ ಅನೇಕ ಅಸಮಾಧಾನಿತ ನಾಯಕರು ಪಕ್ಷ ಇಡುವ ಮಾತನಾಡಿದ್ದು ಈಗಾಗಲೇ ಮಾಜಿ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಬಿಜೆಪಿ ಬಿಟ್ಟಿದ್ದಾರೆ. ಇದೀಗ ಬಿಜೆಪಿ ಪಾಲಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂದಿಟ್ಟಿರುವ ಟಿಕೆಟ್ ಬೇಡಿಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಜಗದೀಶ್ ಶೆಟ್ಟರ್, ಬಿಜೆಪಿ ಹೈಕಮಾಂಡ್‌ಗೆ ಟಿಕೆಟ್ ನೀಡುವ ಬಗ್ಗೆ ಇಂದು ಡೆಡ್‌ಲೈನ್ ನೀಡಿದ್ದು ಇಂದೇ  ತೀರ್ಮಾನ ಕೈಗೊಳ್ಳುವಂತೆ ಹೈಕಮಾಂಡ್‌ಗೆ ಒತ್ತಡ ಹೇರುತ್ತಿದ್ದಾರೆ.

ಇಂದೇ ಟಿಕೆಟ್ ನಿರ್ಧಾರ ಮಾಡಿ!

ಇಂದು ಬಿಜೆಪಿ ಹೈಕಮಾಂಡ್‌ನ ತೀರ್ಮಾನವನ್ನು ಕಾದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಶೆಟ್ಟರ್ ಉದ್ದೇಶಿಸಿದ್ದಾರೆ. ಜಗದೀಶ್ ಶೆಟ್ಟರ್ ಬಂಡಾಯ ಸಾರಿದರೆ ಪಕ್ಷಕ್ಕೆ ಮತ್ತಷ್ಡು ಮುಜುಗರ ಉಂಟಾಗುವ ಸಾಧ್ಯತೆ ಇದೆ. ಆದರೆ ಮತ್ತೊಂದೆಡೆ ಶೆಟ್ಟರ್‌ಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್‌ಗೆ ಮನಸ್ಸಿಲ.್ಲ ಈ ನಡುವೆ ಮಾಜಿ ಸಿಎಂ ಶೆಟ್ಟರ್ ಕೂಡ ಗಡುವು ನೀಡಿರುವುದರಿಂದ ಬಿಜೆಪಿ ಹೈಕಮಾಂಡ್ ಇಕ್ಕಟ್ಟಿನಲ್ಲಿ ಸಿಲುಕಿದೆ.

ಈಗಾಗಲೇ ಲಕ್ಷö್ಮಣ ಸವದಿ ರಾಜೀನಾಮೆ ನೀಡಿದ್ದು ಇದರಿಂದಾಗಿ ಪಕ್ಷಕ್ಕೆ ಡ್ಯಾಮೇಜ್ ಉಂಟಾಗಿದೆ. ಇದೀಗ ಶೆಟ್ಟರ್ ಅದೇ ಹಾದಿ ಹಿಡಿದರೆ ಪಕ್ಷದ ವರ್ಚಸ್ಸು ರಾಜ್ಯದಲ್ಲಿ ಏನಾಗಬಹುದು ಎಂಬ ಆತಂಕ ಬಿಜೆಪಿ ಹೈಕಮಾಂಡ್‌ಗೆ ಉಂಟಾಗಿದೆ.