ITT: ಮಹಾ ಕುಂಭಮೇಳ ಮೂಲಕ ಜನಪ್ರಿಯತೆಗಳಿಸಿದ್ದ 'ಐಐಟಿ ಬಾಬಾ' ಎಂದೇ ಜನಪ್ರಿಯರಾದ ಅಭಯ್ ಸಿಂಗ್ ಅವರನ್ನು ಗಾಂಜಾ ಸಹಿತ ಸೋಮವಾರ ಬಂಧಿಸಲಾಗಿದ್ದು, ಸಲ್ಪ ಸಮಯದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಹೊಟೇಲ್ವೊಂದರಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ದಾಳಿ ನಡೆಸಿದ ಪೊಲೀಸರು ಅತನನ್ನು ಬಂಧಿಸಿದ್ದಾರೆ. ಇತನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತನ ಬಳಿ ಪತ್ತೆಯಾದ ಗಾಂಜಾ ಪ್ರಮಾಣವು ಅನುಮತಿಸಲಾದ ಮಿತಿಯೊಳಗೆ ಇದ್ದುದರಿಂದ ಪೊಲೀಸರು ಆತನನ್ನು ಸ್ವಲ್ಪ ಸಮಯದ ಬಂಧನದ ನಂತರ ಬಿಡುಗಡೆ ಮಾಡಿದರು ಎಂದು ವರದಿಯಾಗಿದೆ.
ಬಿಡುಗಡೆಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಭಯ್ ಸಿಂಗ್, ಪ್ರಸಾದ(ಗಾಂಜಾ) ಸೇವನೆ ಮಾಡಿದ್ದೇನೆ. ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)