ನ್ಯೂಸ್

ದೀಪಿಕಾ ಜತೆ ಕೆಲಸ ಮಾಡುವುದು ಸುಲಭ; ನಿರ್ದೇಶಕ ಇಮ್ತಿಯಾಜ್ ಅಲಿ ಹೀಗೆಳಿದ್ದೇಕೆ? | Imtiaz Ali

ಮುಂಬೈ: ಇಮ್ತಿಯಾಜ್ ಅಲಿ(Imtiaz Ali) ಚಿತ್ರರಂಗದಲ್ಲಿ ನಿರ್ದೇಶಕರಾಗಿ ವಿಶಿಷ್ಟ ಗುರುತನ್ನು ಹೊಂದಿದ್ದಾರೆ. ಇಂತಹ ನಿರ್ದೇಶಕ ಭಾರತೀಯ ಚಲನಚಿತ್ರೋದ್ಯಮದ ನಟಿಯರು ಎಲ್ಲರಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಆಗಾಗ್ಗೆ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಾರೆ ಎಂದು ಮಹಿಳೆಯರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಜತೆಗೆ ದೀಪಿಕಾ ಪಡುಕೋಣೆ ಅವರ ಕೆಲಸವನ್ನು ಹೊಗಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಇಮ್ತಿಯಾಜ್​ ಅಲಿ ಅವರು ದೀಪಿಕಾ ಪಡುಕೋಣೆ ಅದ್ಭುತ ನಟಿ. ಅವರೊಂದಿಗೆ ಕೆಲಸ ಮಾಡುವುದು ಅಷ್ಟು ಶ್ರಮವಿಲ್ಲ. ಅವರು ಸೆಟ್​ನಲ್ಲಿದ್ದಾಗ ನನಗೆ ತುಂಬಾ ಆರಾಮದಾಯಕವಾಗಿದೆ ಎಂದು ಹೇಳಿದ್ದಾರೆ.

ಸೆಟ್​ನಲ್ಲಿ ತಮ್ಮ ಸಹ ನಟರಿಗಿಂತ ಮುಂಚೆಯೇ ತಯಾರಾಗಿರುತ್ತಾರೆ. ರಣಬೀರ್ ಕಪೂರ್ ಅಥವಾ ಸೈಫ್ ಅಲಿಖಾನ್ ಅನ್ನು ಮರೆತುಬಿಡಿ, ಸೆಟ್​ನಲ್ಲಿ ಸಿದ್ಧರಾಗಿ ಕ್ಯಾಮೆರಾ ಎದುರು ನಿಲ್ಲುವ ರೇಸ್​ನಲ್ಲಿ ದೀಪಿಕಾ ಎಲ್ಲರನ್ನೂ ಸೋಲಿಸುತ್ತಾರೆ. ಸ್ಕ್ರಿಪ್ಟ್​ ಇಲ್ಲದ ಸರಳವಾದ ಶಾಟ್​ಗಳಿಗೂ ಸಹ ತಾನು ಸಿದ್ಧ ಎಂದು ಮುಂದು ಬರುತ್ತಾಳೆ ಎಂದು ದೀಪಿಕಾ ಕೆಲಸವನ್ನು ಇಮ್ತಿಯಾಜ್​ ಅಲಿ ಶ್ಲಾಘಿಸಿದರು.

ಆದರೆ ಅವರ ಹೊಗಳಿಕೆ ಕೇವಲ ದೀಪಿಕಾ ಅವರಿಗೆ ಮಾತ್ರ ನಿಲ್ಲಲಿಲ್ಲ. ಇಮ್ತಿಯಾಜ್ ಅವರು ಉದ್ಯಮದಲ್ಲಿನ ಎಲ್ಲಾ ಮಹಿಳೆಯರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನಾನು ಮಾತನಾಡುತ್ತಿರುವುದು ಹಿಂದಿ ಚಿತ್ರರಂಗದ ಗ್ಲಾಮರ್ ಹುಡುಗಿಯರು ಎಂದು ಕರೆಯಲ್ಪಡುವ ನಾಯಕಿಯರ ಬಗ್ಗೆ. ಅವರು ತಮ್ಮ ನೋಟ, ವೇಷಭೂಷಣಗಳ ಕೆಲಸವನ್ನು ಪ್ರಾರಂಭಿಸಲು ಬೇರೆಯವರಿಗಿಂತ ಹಲವು ಗಂಟೆಗಳ ಮೊದಲು ಸೆಟ್‌ಗೆ ಬರಬೇಕು. ಅಹಿತಕರ ಸೀನ್​​ಗಳ ಶೂಟ್​ ಮಾಡಬೇಕು, ಚಳಿ ಅಥವಾ ಶೀತ ಯಾವುದೇ ವಾರಾವರಣವಿದ್ದರೂ ತುಂಡು ಬಟ್ಟೆಗಳನ್ನು ಧರಿಸಬೇಕು. ಕೆಲವೊಮ್ಮೆ ಕಡಿಮೆ ಸಮಯ ನಿದ್ರೆ ಮಾಡುತ್ತಾರೆ. ಚಿತ್ರರಂಗದಲ್ಲಿ ಹೆಚ್ಚು ಕಷ್ಟ ಪಟ್ಟು ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

ದೀಪಿಕಾ ಪಡುಕೋಣೆ, ಇಮ್ತಿಯಾಜ್​ ಅಲಿ ಜತೆ ಲವ್ ಆಜ್ ಕಲ್ ಸಿನಿಮಾದಲ್ಲಿ ಮೊದಲ ಬಾರಿಗೆ ಕೆಲಸ ಮಾಡಿದರು. ನಂತರ ಕಾಕ್‌ಟೈಲ್ ಮತ್ತು ತಮಾಶಾದಂತಹ ಹಿಟ್‌ ಚಿತ್ರಗಳಲ್ಲಿ ಜತೆಗೂಡಿ ಕೆಲಸ ಮಾಡಿದ್ದಾರೆ. (ಏಜೆನ್ಸೀಸ್​​)