ನ್ಯೂಸ್

ಬೆಂಗಳೂರಿಗೆ ಜಲಕಂಟಕ: ದೇಶದ 30 ನಗರಗಳಿಗೆ ಕಾದಿದೆ ಗಂಭೀರ ಆಪತ್ತು...

ನವದೆಹಲಿ: ಹಸಿರನ್ನು ಕೊಲ್ಲುತ್ತಿರುವ ನಗರೀಕರಣ, ಜಾಗತಿಕ ತಾಪಮಾನ ತಡೆಗೆ ತುರ್ತು ಕ್ರಮಕೈಗೊಳ್ಳದಿದ್ದರೆ ರಾಜಧಾನಿ ಬೆಂಗಳೂರು, ಮುಂಬೈ, ಕೋಲ್ಕತ ಸಹಿತ ಭಾರತದ 30 ನಗರಗಳು ಕೆಲವೇ ದಶಕಗಳಲ್ಲಿ ಭಾರಿ ಜಲ ಗಂಡಾಂತರಕ್ಕೀಡಾಗಬಹುದೆಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಭಾರತದ ಪರಿಸರದ ಭವಿಷ್ಯ ನಗರಗಳಲ್ಲಿದೆ. ಭಾರತದಲ್ಲಿ ವೇಗವಾಗಿ ನಗರೀಕರಣ ಆಗುತ್ತಿರುವುದರಿಂದ ಬೆಳವಣಿಗೆ ಹಾಗೂ ಸುಸ್ಥಿರತೆಯಲ್ಲಿ ನಗರಗಳು ಮುಂಚೂಣಿಯಲ್ಲಿರುತ್ತವೆ. ಕೂಡಲೇ ನಗರೀಕರಣ, ತಾಪಮಾನ ತಡೆಗೆ ಕ್ರಮಕೈಗೊಳ್ಳದಿದ್ದಲ್ಲಿ ಪ್ರವಾಹದ ಜತೆ ಜತೆಗೆ ಜಲಕ್ಷಾಮ ಕೂಡ ಬಾಧಿಸಬಹುದೆಂದು ವಿಶ್ವ ವ್ಯಾಪಿ ನಿಧಿ (ವರ್ಲ್ಡ್ ವೈಡ್ ಫಂಡ್- ಡಬ್ಲ್ಯು.ಡಬ್ಲ್ಯು.ಎಫ್.) ಎಚ್ಚರಿಕೆ ನೀಡಿದೆ.

ಪರಿಹಾರವೇನು?

  • ಜಲಾನಯನ, ಜೌಗು ಪ್ರದೇಶಗಳ ಪುನರುಜ್ಜೀವನ ಪ್ರಾಕೃತಿಕ ಪರಿಹಾರ
  • ಭಾರತದ ಸ್ಮಾರ್ಟ್ ಸಿಟಿ ಉಪಕ್ರಮ ನಗರಗಳ ಜಲ ನಿರ್ವಹಣೆಗೆ ಸಮಗ್ರ ಚೌಕಟ್ಟನ್ನು ಒದಗಿಸಬಲ್ಲದು