ನ್ಯೂಸ್

Stock Market: ಷೇರುಪೇಟೆಯಲ್ಲಿ ಮಿಂಚಿದ IT ಸ್ಟಾಕ್​; ಸೆನ್ಸೆಕ್ಸ್​ 314, ನಿಫ್ಟಿ 95 ಅಂಕ ಏರಿಕೆ

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ 2ನೇ ದಿನವಾದ ಮಂಗಳವಾರ (ಸೆ.09) ಏರಿಕೆ ಕಂಡು ಆರೋಗ್ಯಕರ ವಹಿವಾಟು ನಡೆಸಿದೆ.

ಬಿಎಸ್‌ಇ ಸೆನ್ಸೆಕ್ಸ್ 314 ಪಾಯಿಂಟ್‌ಗಳೊಂದಿಗೆ ಶೇ.0.39% ಏರಿಕೆಯೊಂದಿಗೆ 81,101 ಅಂಕಕ್ಕೆ ಜಿಗಿದಿದೆ. ನಿಫ್ಟಿ50 ಸೂಚ್ಯಂಕವು 95.45 ಪಾಯಿಂಟ್‌ಗಳ ಏರಿಕೆಯೊಂದಿಗೆ 24,868 ಅಂಕಕ್ಕೆ ಮುಕ್ತಾಯಗೊಂಡಿದೆ.ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 0.2 ಪ್ರತಿಶತ ಏರಿಕೆ ಕಂಡಿವೆ.

ಇನ್ಫೋಸಿಸ್, ಡಾ.ರೆಡ್ಡೀಸ್ ಲ್ಯಾಬ್ಸ್, ವಿಪ್ರೋ, ಟೆಕ್ ಮಹೀಂದ್ರಾ, ಅದಾನಿ ಪೋರ್ಟ್ಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದವು, ಆದರೆ ಎಟರ್ನಲ್, ಟ್ರೆಂಟ್, ಜಿಯೋ ಫೈನಾನ್ಷಿಯಲ್, ಟಾಟಾ ಮೋಟಾರ್ಸ್, ಟೈಟಾನ್ ಕಂಪನಿ ನಷ್ಟ ಅನುಭವಿಸಿವೆ.

ಟಿಸಿಎಸ್, ಟೆಕ್ ಮಹೀಂದ್ರಾ ಮತ್ತು ಎಚ್‌ಸಿಎಲ್ ಟೆಕ್ ಸೇರಿದಂತೆ ಇತರ ಐಟಿ ಷೇರುಗಳು ಸಹ ಇಂದು ಭರ್ಜಿರಿ ಲಾಭ ಗಳಿಸಿವೆ.(ಏಜೆನ್ಸೀಸ್​)