ಶಿವಮೊಗ್ಗ: ಬಜೆಟ್‌ನಲ್ಲಿ ಮಂಡಿಸಿರುವ ಸೌಲಭ್ಯಗಳು ಮೇಲ್ವರ್ಗ, ಮಧ್ಯ ವರ್ಗದವರಿಗಿಂತ ಕೆಳವರ್ಗದ ಜನತೆಗೆ ತಲುಪುವುದು ಅವಶ್ಯಕ ಎಂದು ಆಂಧ್ರಪ್ರದೇಶ ಸರ್ಕಾರದ ಯೋಜನಾ ನೀತಿ ಸಲಹೆಗಾರ ಡಾ. ಎನ್.ಡಿ.ವಿವೇಕ್ ತಿಳಿಸಿದರು.
ಕುವೆಂಪು ವಿವಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದ ವಿಭಾಗದಲ್ಲಿ ಶುಕ್ರವಾರ ಬದಲಾವಣೆಗಾಗಿ ಬಜೆಟ್: ಸಾಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತನ ದೃಷ್ಟಿಕೋನ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸರ್ಕಾರದ ಆದೇಶ, ಅಭಿವೃದ್ಧಿ, ನೀತಿ-ನಿಯಮಗಳ ಕುರಿತು ಸರಿಯಾದ ಮಾರ್ಗಗಳಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಹಾಗೂ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವ ಚಟುವಟಿಕೆಗಳಲ್ಲಿ ಪತ್ರಕರ್ತರು ತೊಡಗಬೇಕು ಎಂದರು.
ವಿಭಾಗದ ಮುಖ್ಯಸ್ಥ ಡಾ. ಪಿ.ಎ.ವರ್ಗೀಸ್, ಪ್ರಾಧ್ಯಾಪಕರಾದ ಡಾ. ಸತೀಶ್‌ಕುಮಾರ್, ಉಪನ್ಯಾಸಕಿ ವರ್ಣಶ್ರೀ, ಸಂಶೋಧನಾ ವಿದ್ಯಾರ್ಥಿಗಳಾದ ಪರಸಪ್ಪ, ಸಂಗೀತ ಹಾಗೂ ಸ್ನಾತಕೊತ್ತರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.