ನ್ಯೂಸ್

ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ

ನಂಜನಗೂಡು: ದೊಡ್ಡಕವಲಂದೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕಿನಲ್ಲೇ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಎಂದು ಸಂಘದ ನಿರ್ದೇಶಕ ಜಿ.ಪ್ರಕಾಶ್ ಹೇಳಿದರು.

ದೊಡ್ಡಕವಲಂದೆ ಗ್ರಾಮದ ಶಾದಿ ಮಹಲ್‌ನಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 2023-24ನೇ ಸಾಲಿನಲ್ಲಿ 844 ರೈತರಿಗೆ 9,39,31,000 ರೂ. ಸಾಲ ವಿತರಣೆ ಮಾಡಲಾಗಿದ್ದು, ಹೈನುಗಾರಿಕೆಗೆ 2.50 ಲಕ್ಷ, ಬೆಳೆಸಾಲ 69 ಲಕ್ಷ ರೂ. ವಿತರಿಸಲಾಗಿದೆ. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದಕ್ಕೆ 2023-24ನೇ ಸಾಲಿನಲ್ಲಿ ಸಂಘಕ್ಕೆ ಅಪೆಕ್ಸ್ ಬ್ಯಾಂಕಿನಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಬಂದಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಠೇವಣಿದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಶಿವಲಿಂಗಪ್ಪ, ಉಪಾಧ್ಯಕ್ಷ ಪಾಸಿಲ್ ಖಾನ್, ಮಹದೇವಪ್ಪ, ಎಚ್.ಕೆ.ನಾಗರಾಜು, ನಿಸಾರ್ ಅಹಮದ್, ರಾಚಯ್ಯ, ಕೃಷ್ಣ ನಾಯಕ, ಗೋವಿಂದಸ್ವಾಮಿ, ಮಂಜುಳಾ, ಗೌರಮ್ಮ, ಸಿದ್ದಪ್ಪ ಹಾಗೂ ಸಿಇಒ ಪರಶಿವಪ್ಪ ಇತರರು ಇದ್ದರು.