Shashwat Acharya Ji Maharaj: ಬೃಂದಾವನದ 19 ವರ್ಷದ 'ಜೆನ್ ಝಿ ಬಾಬಾ' ಎಂದೇ ಹೆಸರಾಗಿರುವ ಶ್ರೀ ಸ್ವಾಮಿ ಶಾಶ್ವತ್ ಆಚಾರ್ಯ ಜಿ ಮಹಾರಾಜ್ ತಮ್ಮ ವೈರಲ್ ಪೋಸ್ಟ್‌ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪೋಸ್ಟ್‌ಗಳಿಗೆ ಬರುತ್ತಿರುವ ಕೆಲ ಅಸಭ್ಯ ಕಾಮೆಂಟ್‌ಗಳು ಮಿತಿ ಮೀರಿದ್ದು, ತಮ್ಮ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದಂತೆ ಅನಿಸುತ್ತಿದೆ ಎಂದು ಅವರು ಸಂದರ್ಶನ ಒಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಂದರ್ಶನದ ವೇಳೆ ಆಂಕರ್, ಅವರ ‘ಕಮಲದಂತಹ ಕಣ್ಣುಗಳು’ ಸೇರಿದಂತೆ ರೂಪವನ್ನು ಹೊಗಳಿ ಬಂದಿರುವ ಕಾಮೆಂಟ್‌ಗಳ ಬಗ್ಗೆ ಪ್ರಸ್ತಾಪಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳು ಎದುರಿಸುವ ಕಿರುಕುಳ ಹಾಗೂ ಚೇಷ್ಟೆಗಳ ನೋವು ಈಗ ನಿಮಗೂ ಅರ್ಥವಾಗುತ್ತಿದೆಯೇ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಆಚಾರ್ಯ, ‘ರಸ್ತೆಯಲ್ಲಿ ನಡೆದುಹೋಗುವ ಹೆಣ್ಣುಮಕ್ಕಳಿಗೆ ಮಾಡುವ ಕಾಮೆಂಟ್‌ಗಳಿಗೆ ಹೋಲಿಸಿದರೆ ನನಗೆ ಬಂದಿರುವುದು ಶೇ. 1ರಷ್ಟೂ ಅಲ್ಲ.
ಇನ್ನೂ, ನಮಗೆ ಇಷ್ಟಕ್ಕೇ ಇಷ್ಟೊಂದು ಬೇಸರವಾಗುತ್ತಿದ್ದರೆ, ಪ್ರತಿದಿನ ಅಂತಹ ಅಸಭ್ಯ ಮಾತುಗಳನ್ನು ಕೇಳುವ ಹೆಣ್ಣುಮಕ್ಕಳಿಗೆ ಇನ್ನೆಷ್ಟು ನೋವಾಗಬೇಡ?’ ಎಂದು ಕಳವಳ ವ್ಯಕ್ತಪಡಿಸಿದರು.
ತಮ್ಮ ಪೋಸ್ಟ್‌ಗಳ ಕೆಳಗೆ ಸಭ್ಯತೆಯ ಗೆರೆ ದಾಟಲಾಗಿದೆ ಎಂದ ಶಾಶ್ವತ್ ಆಚಾರ್ಯ, ತಾವು ಬೃಂದಾವನ ಗೋಡಾ ವಿಹಾರ ಮಂದಿರದ ಪೀಠಾಧೀಶ್ವರರಾಗಿದ್ದು 'ಭಾಗವತ್ ಕಥಾ ವಾಚಕ್' ಆಗಿ ಪ್ರವಚನ ನೀಡುತ್ತಿರುವುದಾಗಿ ಹೇಳಿದ್ದಾರೆ. ಯವ ರೂಪದಿಂದಾಗಿ ನೆಟ್ಟಿಗರಿಂದ 'ಜೆನ್ ಝಿ ಬಾಬಾ' ಎನಿಸಿಕೊಂಡಿರುವ ಇವರಿಗೆ, ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ಕಾಮೆಂಟ್‌ಗಳು ಹರಿದುಬರುತ್ತಿರುತ್ತವೆ.